ಪಿಯು ಫಲಿತಾಂಶ: 15ನೇ ಸ್ಥಾನಕ್ಕೆ ಕುಸಿದ ಮೈಸೂರು: ಕಾಲೇಜಿನ 48 ವರ್ಷದ ಇತಿಹಾಸದಲ್ಲೇ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ..

ಮೈಸೂರು,ಜು,14,2020(www.justkannada.in): ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಕಳೆದ ಬಾರಿಗಿಂತ ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆ ನಾಲ್ಕು ಸ್ಥಾನ ಕುಸಿತ ಕಂಡಿದೆ.

ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿ ಮೈಸೂರು 15ನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕಿಂತ ಕಳೆದ ಶೈಕ್ಷಣಿಕ ಸಾಲಿನಲ್ಲಿ 11ನೇ ಸ್ಥಾನದಲ್ಲಿತ್ತು. ಆದರೆ ಈ ವರ್ಷ ನಾಲ್ಕು ಸ್ಥಾನಗಳ ಕುಸಿತ ಕಂಡಿದೆ.Second PU- result-First place -udupi

ಕಳೆದ ಶೈಕ್ಷಣಿಕ ಸಾಲಿನಲ್ಲಿ 68.55 ಫಲಿತಾಂಶ ಬಂದಿತ್ತು. ಈ ಬಾರಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 67.98 ಫಲಿತಾಂಶ ಬಂದಿದೆ.  ಮೈಸೂರು ನಗರದ 26 ಸೇರಿದಂತೆ ಜಿಲ್ಲೆಯಾದ್ಯಂತ 50 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.  ಒಟ್ಟು 31,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

600ಕ್ಕೆ 582 ಅಂಕ ಗಳಿಸಿದ ಮೈಸೂರು ವಿದ್ಯಾರ್ಥಿನಿ..

 second PU-Result- Mysore -fell - 15th place.

ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್.ಸ್ಪಂದನಾ ಕಲಾವಿಭಾಗದಲ್ಲಿ 600ಕ್ಕೆ 582 ಅಂಕ ಗಳಿಸುವ ಮೂಲಕ ಕಾಲೇಜಿನ 48 ವರ್ಷದ ಇತಿಹಾಸದಲ್ಲೇ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ಪಂದನಾ ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದ ನಿವಾಸಿಯಾಗಿದ್ದು, ಇತಿಹಾಸ 100, ಅರ್ಥಶಾಸ್ತ್ರ 100, ರಾಜ್ಯಶಾಸ್ತ್ರ 98, ಕನ್ನಡ 96, ಭೂಗೋಳ ಶಾಸ್ತ್ರ 98, ಇಂಗ್ಲಿಷ್ನಲ್ಲಿ 90 ಅಂಕ ಪಡೆದಿದ್ದಾರೆ.

Key words: second PU-Result- Mysore -fell – 15th place.