ಪ್ರವಾಸಿಗರೆ ಬನ್ನಿ ನಾಡಹಬ್ಬದಲ್ಲಿ ಪಾಲ್ಗೊಳ್ಳಿ, ನಿಮ್ಮ ಸುರಕ್ಷತೆ ನಮ್ಮ ಹೊಣೆ : ನಗರ ಪೊಲೀಸ್ ಆಯುಕ್ತರ ಆಹ್ವಾನ.

ಮೈಸೂರು, ಸೆ.24, 2019 : (www.justkannada.in news) : ನಾಡ ಹಬ್ಬ ದಸರ ಮಹೋತ್ಸವದಲ್ಲಿ ಭಾಗವಹಿಸುವ
ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ಹಾಗೂ ಭದ್ರತೆ ಒದಗಿಸಲಾಗಿದೆ. ಆದ್ದರಿಂದ ನಿರ್ಭಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಾಡಹಬ್ಬದಲ್ಲಿ ಭಾಗವಹಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆಹ್ವಾನ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಹೇಳಿದಿಷ್ಟು…

ನಾಡಹಬ್ಬ ದಸರ ಮಹೋತ್ಸವ ಜನರ ಹಬ್ಬ. ಇತಿಹಾಸದ ಹಿನ್ನೆಲೆಯುಳ್ಳ ದಸರೆಯನ್ನು ಬಂದೋಬಸ್ತ್ ನೆಪದಲ್ಲಿ ಖಾಕಿ ಸರ್ಪಗಾವಲು ಮಾಡಲಾಗದು. ಆದರೆ ಸುರಕ್ಷತೆಗೆ ಪೂರಕವಾದ ಅಗತ್ಯ ಕ್ರಮಗಳನ್ನು ಇಲಾಖೆ ಕೈಗೊಂಡಿದೆ.
ಈಗಾಗಲೇ ನಗರದ ವಿವಿಧ ಕಡೆಗಳಲ್ಲಿ ಪ್ರಮುಖವಾಗಿ ಜಂಬೂಸವಾರಿ ಸಾಗುವ ಮಾರ್ಗ ಹಾಗೂ ದಸರ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಅಂದಾಜು ಸುಮಾರು ll, 9l7 ಸಿಸಿ ಟಿವಿ ಕ್ಯಾಮೆರಾಗಳನ್ನು (ಸಾರ್ವಜನಿಕರು ಅಳವಡಿಸಿಕೊಂಡಿರುವ ) ಗುರುತಿಸಲಾಗಿದೆ. ಜತೆಗೆ ದಸರ ವೇಳೆ ಸಿಸಿಟಿವಿ ರೆಕಾರ್ಡ್ ಚಾಲ್ತಿಯಲ್ಲಿಟ್ಟು ಅವಶ್ಯಕವಾದಲ್ಲಿ ಫೂಟೇಜ್ ನೀಡುವಂತೆಯೂ ಈ ವ್ಯಕ್ತಿಗಳಿಗೆ ಮನವಿ ಮಾಡಲಾಗಿದೆ. ಇದಲ್ಲದೆ ಪೊಲೀಸ್ ಇಲಾಖೆ ವತಿಯಿಂದಲೇ 212 ಸಿಸಿಟಿವಿ ಅಳವಡಿಸಲಾಗಿದೆ.
ಪೊಲೀಸ್ ಇಲಾಖೆ ವತಿಯಿಂದಲೇ ಮೂರು ಡ್ರೋನ್ ಕ್ಯಾಮೆರಾಗಳು ವಿಡಿಯೋ ಸೆರೆ ಹಿಡಿಯುವ ಕಾರ್ಯಕ್ಕೂ ಸಿದ್ಧತೆ ನಡೆಸಲಾಗಿದೆ.
ಅರಮನೆ ಮತ್ತು ಬನ್ನಿಮಂಟಪದ ಎಲ್ಲಾ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿವೊರ್ನ್ ಕ್ಯಾಮೆರಾಗಳನ್ನ ನೀಡಲಿದ್ದೆವೆ.
ಅಪರಾಧಗಳನ್ನ ತಡೆಗಟ್ಟಲು ಬೆಂಗಳೂರು ನಗರ ಸಿಸಿಬಿ ಪೊಲೀಸರ ತಂಡ ಹಾಗೂ ಸಿಐಡಿ ಯ ಮಾದಕ ದ್ರವ್ಯ ತಡೆ ತಂಡ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನ ನಿಯೋಜಿಸಲಾಗುತ್ತದೆ.
ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಮುಂಚಿತವಾಗಿಯೇ l6 ಅಗ್ನಿ ಶಾಮಕದಳ ಮತ್ತು l6 ಆಂಬುಲೆನ್ಸ್ ಗಳ ನಿಯೋಜಿಸಲಾಗುತ್ತದೆ.
ಮೊದಲನೇ ಹಂತ, ಸೆ. 29ರಿಂದ ಅ. 5ರ ವರಗೆ ಹಾಗೂಎರಡನೇ ಹಂತ ಸೆ. 6ರಿಂದ 8ವರಗೆ ವ್ಯವಸ್ಥೆ ಎಂದು ಬಂದೋಬಸ್ತ್ ವ್ಯವಸ್ಥೆಯನ್ನು ವಿಂಗಡಿಸಿ ಅದರಂತೆ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ದಸರಕ್ಕಾಗಿ ಒಟ್ಟು 84O7 ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪೈಕಿ 2978 ಸ್ಥಳೀಯ ಪೊಲೀಸರು, 442l ಮಂದಿ ಸಿಬ್ಬಂದಿಗಳನ್ನ ಹೊರಗಿನಿಂದ ಕರೆಸಿಕೊಳ್ಳಲಾಗಿದೆ ಹಾಗೂ l ಸಾವಿರ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಪೊಲೀಸ್ ಆಯುಕ್ತರಾದ ಮುತ್ತುರಾಜ್, ಕವಿತಾ ಹಾಗೂ ಇತರರು ಹಾಜರಿದ್ದರು.

key words : mysore-city-police-commissoner-k.t.balakrishna-invites-tourists-to-mysore-dasara

———————————