ಮೈಸೂರು ದಸರಾ: ಮಾವುತ ಮತ್ತು ಕಾವಾಡಿಗಳ ಕುಟುಂಬದವರಿಗೆ ಉಚಿತ ಹೇರ್ ಕಟಿಂಗ್…

ಮೈಸೂರು,ಸೆ,24,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ  ಮಾವುತ ಮತ್ತು ಕಾವಾಡಿಗಳ ಕುಟುಂಬದವರಿಗೆ ಉಚಿತ ಹೇರ್ ಕಟಿಂಗ್ ಕಾರ್ಯ ನಡೆಯಿತು.

ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿರುವ ಗಜಪಡೆಯ ಆನೆಗಳ ಮಾವುತರು ಮತ್ತು ಕಾವಾಡಿಗಳ ಕುಟುಂಬದವರಿಗೆ ಸಿದ್ಧಾರ್ಥ ನಗರ ಸವಿತ ಸಮಾಜದ ವತಿಯಿಂದ ಅರಮನೆ ಅಂಗಳದಲ್ಲಿ ಉಚಿತ ಹೇರ್ ಕಟಿಂಗ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಸಚಿವರಿಗೆ ಸಂಸದ ಪ್ರತಾಪ್ ಸಿಂಹ ‌ ಸಾಥ್ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿ ಸವಿತ ಸಮಾಜದ ಕಾರ್ಯ ವೈಖರಿಯನ್ನು ಶ್ಲಾಘಿಸಿದ ಸಚಿವ ವಿ.ಸೋಮಣ್ಣ, ಇದೊಂದು ಉತ್ತಮ ಕಾರ್ಯ. ದಸರಾ ಎಂದರೆ ಇಷ್ಟೆಲ್ಲಾ ಕಾರ್ಯಕ್ರಮ ಇರುತ್ತೆ ಎಂದು ಗೊತ್ತಿರಲಿಲ್ಲ. ಇಂತಹ ಕಾರ್ಯಕ್ರಮಗಳು ಒಳ್ಳೆಯದು. ಸವಿತಾ ಸಮಾಜ ಒಳ್ಳೆಯ ಕಾರ್ಯ ಮಾಡುತ್ತಿದೆ. ಸಾಕಷ್ಟು ಸಮುದಾಯದವರೂ ಸಹ ಕೇಶ ವಿನ್ಯಾಸ ಮಾಡುತ್ತಾರೆ. ಇದೂ ಕೂಡ ಒಂದು ಉದ್ಯಮ ಎಂದು ಹೇಳಿದರು.

Key words: Mysore Dasara –Free- Hair Cutting –mavutha-Kawadis -Family