ಒಕ್ಕಲಿಗ ಪರಿಷತ್ತಿನ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ಹೊರಟ ಸಿಎಂ ಕುಮಾರಸ್ವಾಮಿ !

ಬೆಂಗಳೂರು, ಜೂನ್ 29, 2019(www.justkannada.in): ಅಮೆರಿಕಾದಲ್ಲಿ ಒಕ್ಕಲಿಗರ ಪರಿಷತ್ ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕಾ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈನತ್ತ ಕುಮಾರಸ್ವಾಮಿ ಪ್ರಯಾಣ ಬೆಳೆಸಿದರು. ಆದಿ ಚುಂಚನಗಿರಿ ಮಠದ ಶಿವನ ದೇವಸ್ಥಾನ ಶಿಲಾನ್ಯಾಸ ಹಾಗೂ ಜುಲೈ 4,5,6ರಂದು ನಡೆಯುವ ಒಕ್ಕಲಿಗ ಪರಿಷತ್ತಿನ ಸಮ್ಮೇಳನದಲ್ಲಿ  ಭಾಗವಹಿಸಲಿದ್ದಾರೆ.

ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಆದಿಚುಂಚನಗಿರಿಯ ಮಠದ ಶಾಖಾ ಮಠದಲ್ಲಿ ನಿರ್ಮಿಸಿರುವ ಕಾಲಭೈರವೇಶ್ವರ ದೇವಸ್ಥಾನದ ದೇಗುಲ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದಾದ ಬಳಿಕ ಜುಲೈ 4ರಂದು ಅಮೆರಿಕ ಒಕ್ಕಲಿಗರ ಪರಿಷತ್ತಿನ ಸಮಾವೇಶ ಕೂಡ ನಡೆಯಲಿದ್ದು, ಅದರಲ್ಲೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆ.