ಡಿವಿಎಸ್ ಮತ್ತು ರೇಣುಕಾಚಾರ್ಯ ಯಾವುದೋ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ್ದಾರೆ- ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ

ಕಾರವಾರ,ಆಗಸ್ಟ್,2,2021(www.justkannada.in) ಮಾಜಿ ಕೇಂದ್ರ ಸಚಿವ ಸದಾನಂದಗೌಡ ಮತ್ತು ಶಾಸಕ ಎಂ.ಪಿ. ರೇಣುಕಾಚಾರ್ಯ ಯಾವುದೋ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ್ದಾರೆ. ಹೀಗಾಗಿ  ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ಧಾರೆ.

ಕಾರವಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಂಯ್ಯ, ಸದಾನಂದಗೌಡ ಮತ್ತು ರೇಣುಕಾಚಾರ್ಯ ಯಾವುದೋ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿರಬಹುದು. ವಿಡಿಯೋಗಳಲ್ಲಿ ಗ್ರಾಫಿಕ್ಸ್ ಮಾಡುವುದಾದರೆ ರೇಣುಕಾಚಾರ್ಯ, ಸದಾನಂದಗೌಡರದ್ದೇ ಯಾಕೆ ಮಾಡಬೇಕು? ಬೇರೆಯವರನ್ನು ಯಾಕೆ ಮಾಡಲ್ಲ?  ಎಂದು ಟೀಕಿಸಿದರು.

ಇನ್ನು ರಾಜ್ಯದಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಕೊರೋನಾ ನಿಯಂತ್ರಣ ಸರ್ಕಾರದ ಕೆಲಸ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆಗೆ ದೆಹಲಿಗೆ ಓಡಾಡುತ್ತಿದ್ದಾರೆ. ಒಮ್ಮೇ ದೆಹಲಿಗೆ ಹೋಗಿ ಫೈನಲ್ ಮಾಡಬೇಕು. ಪದೇ ಪದೇ ದೆಹಲಿಗೆ ಹೋಗಬಾರದು ಎಂದರು.

ಮಹಾರಾಷ್ಟ್ರದಲ್ಲಿಯೂ ಕೊರೋನಾ ಹೆಚ್ಚಳವಾಗುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು. 2 ಡೋಸ್ ಲಸಿಕೆ ಪಡೆದವರು, ಕೋವಿಡ್ ನೆಗೆಟಿವ್ ವರದಿ ಇರುವವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸಿದ್ಧರಾಮಯ್ಯ ಸಲಹೆ ನೀಡಿದರು.

ENGLISH SUMMARY…

DVS and Renukacharya are trapped in some sex scandal: Former CM Siddaramaiah
Karwar, August 2, 2021 (www.justkannada.in): “Former Union Minister D.V. Sadanandagowda and MLA M.P. Renukacharya are trapped some sex scandal. That is why they have taken stay from the court,” opined former Chief Minister Siddaramaiah.
Speaking to the reporters at Karwar he said both of them might have been involved in sex scandal. If it is possible to do graphics in videos, why will someone create only there videos? Why not others? he questioned.
In his reply to the increase in number of COVID cases in the state he observed that the new Chief Minister Basavaraj Bommai is travelling to and fro from Delhi to Bengaluru regarding formation of cabinet. He also observed that it should be finalized once by visiting New Delhi and not visiting often.
Keywords: Former CM/ Siddaramaiah/ former Union Minister/ D.V. Sadanada gowda/ MLA M.P. Renukacharya/ sex scandal

Key words: DV sadananda gowda-MLA- Renukacharya –some-sex scandal- Former CM -Siddaramaiah