ಬಿಜೆಪಿ ಕುತಂತ್ರ ತಡೆಗಟ್ಟಲು ಸಚಿವರಿಂದ ರಾಜೀನಾಮೆ: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ- ಸಿದ್ದರಾಮಯ್ಯ, ಕೆ.ಸಿ ವೇಣುಗೋಪಾಲ್ ರಿಂದ ವಾಗ್ದಾಳಿ…

ಬೆಂಗಳೂರು,ಜು,8,2019(www.justkannada.in):  ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ  ರಾಜ್ಯಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು, ಈ ವೇಳೆ ಮಾತನಾಡಿದ ಕೆ.ಸಿ ವೇಣುಗೋಪಾಲ್,  ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದಾರೆ. ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲೂ ಇದನ್ನೇ ಮಾಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಸಂವಿಧಾನ ವಿರೋಧಿ ಕೆಲಸಕ್ಕೆ ಬಿಜೆಪಿ ಮುಂದಾಗಿದೆ.  ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಐಟಿ ಇಡಿ ಮೂಲಕ ಶಾಸಕರಿಗೆ ಬೆದರಿಕೆ: ಅಪರೇಷನ್ ಕಮಲ ನಡೆಸುವ ಬಿಜೆಪಿ ಪ್ಲಾನ್ ಯಶಸ್ವಿಯಾಗಲ್ಲ- ಸಿದ್ದರಾಮಯ್ಯ..

ಇದೇ ವೇಳೆ ಸಿಎಲ್ ಪಪಿ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವುದೇ ಕಾರಣಕ್ಕೂ  ಐಟಿ ಇಡಿ ಬಳಸಿಕೊಂಡು  ಶಾಸಕರನ್ನ ಹೆದರಿಸುತ್ತಿದ್ದಾರೆ.  ಬಿಜೆಪಿಯವರು ಈಗ ಹೊಸ ನಾಟಕ ಶುರುಮಾಡಿದ್ದಾರೆ.  ನಾವೇನು ಮಾಡುತ್ತಿಲ್ಲ ಎಂದು ಹೇಳಿ ನಾಟಕ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ಮಾಡುತ್ತಿರುವ ದೊಡ್ಡ ಪ್ರಹಾರ. ಅಪರೇಷನ್ ಕಮಲ ನಡೆಸುವ ಬಿಜೆಪಿ ಪ್ಲಾನ್ ಯಶಸ್ವಿಯಾಗಲ್ಲ.  2008ರಲ್ಲೂ ಬಿಎಸ್ ಯಡಿಯೂರಪ್ಪ ಇದೇ ರೀತಿ ಮಾಡಿದ್ದರು. ಈಗಲೂ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2018ರ ಚುನಾವಣೆಯಲ್ಲಿ ಜನ ಬಿಜೆಪಿಗೆ ಬೆಂಬಲಿಸಿರಲಿಲ್ಲ. ಬಿಜೆಪಿಗಿಂತ ಕಾಂಗ್ರೆಸ್ ಗೆ ಶೇ. ಹೆಚ್ಚು ಮತ ಬಂದಿದೆ. ಈ ನಡುವೆ 6ನೇ ಬಾರಿ ಬಿಜೆಪಿ ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಿದೆ. ಒಂದು ವರ್ಷದಿಂದ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಈ ಬಾರಿಯೂ ಬಿಜೆಪಿ ವಿಫಲವಾಗುತ್ತೆ. ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.

ಸರ್ಕಾರ ಉಳಿಯುತ್ತೆ.  ಮುಂದುವರೆಯುತ್ತೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲವರಿಗೆ ಅಸಮಾಧಾನವಿದೆ. ಬಿಜೆಪಿ ಕುತಂತ್ರ ತಡೆಗಟ್ಟಲು ಸಚಿವರು ರಾಜೀನಾಮೆ ನೀಡಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು ರಾಜೀನಾಮೆ  ನೀಡಿದ್ದಾರೆ. ನಮಗಿಂತ ನಮಗೆ ಪಕ್ಷವೇ ಮುಖ್ಯ ಎಂದಿದ್ದಾರೆ.  ಯಾರನ್ನು ಬೇಕಾದರೂ ಸಚಿವರನ್ನಾಗಿ ಮಾಡಿ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಹೀಗಾಗಿ ಮಂತ್ರಿ ಮಂಡಲ ಪುನರಚನೆ ಮಾಡುತ್ತೇವೆ. ಅತುರದ ನಿರ್ಧಾರ ತೆಗೆದುಕೊಳ್ಳದಂತೆ  ಅತೃಪ್ತರಿಗೆ ಸೂಚಿಸುತ್ತೇವೆ ಎಂದರು.

summary..

KC Venugopal: What they have done in Telangana, West Bengal. They want to destabilise the government and get Rajya Sabha majority as well
Some Congress and JD(S) MLAs have resigned we agree. Some have grievances and cabinet expansion. For the larger interest of the party we held detailed discussion with the leaders and met ministers
We strongly believe in the strength of the party in Karnataka and we are confident this government will continue
And they entrusted Congress for taking the necessary decision to reshuffle the government in the present scenario. I sincerely thank the ministers for their sacrifice for defeating the anti democratic attitude of BJP. We believe in the MLAs and we are ready to discuss everything. Those who resigned should come back and to strengthen their own party. We are confident that they will come back and this government will continue
The ministers themselves voluntarily resigned from the ministership

Keywords: Resigns- coalition government -cannot – destabilized-Siddaramaiah-KC Venugopal.