ಪಂಚಮಸಾಲಿ ಓಲೈಕೆ ಮುಂದಾದರೆ ಕಾಯಕ ಸಮಾಜದ ಬೆಂಬಲ ಕಳೆದುಕೊಳ್ಳುತ್ತೀರಾ…: ಸರಕಾರಕ್ಕೆ ಕೆ.ಸಿ.ಪುಟ್ಟಸಿದ್ದಶೆಟ್ಟಿ ಎಚ್ಚರಿಕೆ

ಮೈಸೂರು, ಅಕ್ಟೋಬರ್ 10, 2021 (www.justkannada.in): ‘ಪಂಚಮಸಾಲಿ ಸಮುದಾಯವನ್ನು ಓಲೈಸಲು ಮುಂದಾದರೆ, ಜನಸಂಖ್ಯೆಯಲ್ಲಿ ಶೇ 22 ರಷ್ಟಿರುವ ಕಾಯಕ ಸಮಾಜಗಳ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಸರ್ಕಾರವನ್ನು ಎಚ್ಚರಿಸಿದರು.

ಕಾಯಕ ಸಮಾಜಗಳ ಒಕ್ಕೂಟದ ವಿಭಾಗೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮೀಸಲಾತಿ ನೀಡಬೇಕು ಎಂದು ಪಂಚಮಸಾಲಿ ಸಮುದಾಯ ಹೋರಾಟ ನಡೆಸುತ್ತಿದ್ದು, ಸರ್ಕಾರದ ಸಂಧಾನದ ಬಳಿಕ ಸ್ಥಗಿತಗೊಂಡಿದೆ. ಆದರೆ ಯಾವುದೇ ಕಾರಣಕ್ಕೂ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬಾರದು’ ಎಂದರು.

‘ಪಂಚಮಸಾಲಿಗಳ ಮತಕ್ಕಾಗಿ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ. ಶಾಶ್ವತ ಹಿಂದುಳಿದ ವರ್ಗಗಳ ನೀಗ ವರದಿ ಕೊಟ್ಟ ಬಳಿಕ ಮೀಸಲಾತಿ ಬಗ್ಗೆ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗವು ಸ್ವಾಯತ್ತ ಸಂಸ್ಥೆ. ಅಂತಹ ಸಂಸ್ಥೆಗೆ ಶಿಫಾರಸು ಮಾಡುವುದಾಗಿ ಹೇಳಿ ಪಂಚಮಸಾಲಿಗಳನ್ನು ಸಮಾಧಾನ ಮಾಡಿದ್ದಾರೆ. ಆ ರೀತಿಯ ಶಿಫಾರಸು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು’ ಎಂದು ಆಕ್ರೋಶ ಈ ವ್ಯಕ್ತಪಡಿಸಿದರು.

‘ಸಂವಿಧಾನದ ಎಲ್ಲೆ ಮೀರಿ ಓಲೈಕೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಯಕ ಸಮಾದವರು ರಷ್ಟು ಇದ್ದಾರೆ. ಒಂದು ಜಾತಿಯನ್ನು ಓಲೈಸಲು ಮುಂದಾಗಿ, ದೊಡ್ಡ ಸಮುದಾಯವೊಂದನ್ನು ಎದುರು ಹಾಕಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಬೇಡಿ’ ಎಚ್ಚರಿಸಿದರು.

ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೋರಪ್ಪ ಶೆಟ್ಟಿ, ಮಂಡ್ಯ ಜಿಲ್ಲಾ ಅಧ್ಯಕ್ಷ ವಿಜಯ್‌, ಕೊಡಗು ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್, ಮೈಸೂರು ಜಿಲ್ಲೆಯ ಪದಾಧಿಕಾರಿಗಳು ಪಾಲ್ಗೊಂಡರು.