ಇ-ಕಾಮರ್ಸ್ ‘ಶಾಪಿಂಗ್ ಫೆಸ್ಟಿವಲ್’: ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು

ಬೆಂಗಳೂರು, ಅಕ್ಟೋಬರ್ 10, 2021 (www.justkannada.in): ಅಮೆಜಾನ್, ಪ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಭರ್ಜರಿ ವಹಿವಾಟು ನಡೆಸಿವೆ.

ಹೌದು. ಬಿಗ್ ಬಿಲಿಯನ್ ಡೇ, ಶಾಪಿಂಗ್ ಫೆಸ್ಟಿವಲ್ ಮೂಲಕ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಅಕ್ಟೋಬರ್‌ 3ರಂದು ಸೇಲ್ಸ್ ಮೇಳ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ನಡೆಸಿವೆ.

ಕಳೆದ ವರ್ಷದ ಹಬ್ಬದ ಮಾರಾಟ ಸಾಪ್ತಾಹದ ಮೊದಲ ಮೂರು ದಿನಗಳಲ್ಲೇ ಒಟ್ಟಾರೆ ಮಾರಾಟದ 63%ನಷ್ಟು ವಹಿವಾಟು ನಡೆದಿತ್ತು. ಈ ವರ್ಷದ ವೇಳೆ ಗುರಿ ಇಟ್ಟುಕೊಂಡಿರುವ ಮಾರಾಟದ 57%ನಷ್ಟು ವಹಿವಾಟು ಮೊದಲ ಮೂರು ದಿನಗಳಲ್ಲಿ ನಡೆದಿದೆ.

ಕೋವಿಡ್ ಹೊಡೆತದ ಬಳಿಕ ಜನರು ಹೆಚ್ಚಾಗಿ ಖರೀದಿ ಮಾಡಲು ಆನ್ಲೈನ್ ಪ್ಲಾಟ್‌ಫಾರಂಗಳನ್ನೇ ಅವಲಂಬಿಸುತ್ತಿರುವ ಕಾರಣ ಈ ವರ್ಷ ಆನ್ಲೈನ್ ಮೂಲಕ ಒಟ್ಟಾರೆ $49-52 ಶತಕೋಟಿಯಷ್ಟು ವಹಿವಾಟು ನಡೆಯುವ ನಿರೀಕ್ಷೆಯಿದೆ.

key words: E-commerce ‘Shopping Festival’: $ 2.7 billion turnover in four days