ರೇಪ್ ಇನ್ ಇಂಡಿಯಾ: ಹೇಳಿಕೆ ಬಗ್ಗೆ ಕ್ಷಮೆ ಕೇಳುವುದಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…

ನವದೆಹಲಿ,ಡಿ,13,2019(www.justkannada.in): ಮೇಕ್ ಇನ್ ಇಂಡಿಯಾ ಅಲ್ಲ ರೇಪ್ ಇನ್ ಇಂಡಿಯಾ ಎಂಬ ಹೇಳಿಕೆ ಬಗ್ಗೆ ಬಿಜೆಪಿ ಬಳಿ ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ  ವಾಗ್ದಾಳಿ ನಡೆಸುತ್ತಾ ಮೇಕ್ ಇನ್ ಇಂಡಿಯಾ ಅಲ್ಲ ರೇಪ್ ಇನ್ ಇಂಡಿಯಾ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಬಿಜೆಪಿ ಸಂಸದೆ ಸ್ಮೃತಿ ಇರಾನಿ ನೇತೃತ್ವದಲ್ಲಿ ಬಿಜೆಪಿ ಸಂಸದರು ಲೋಕಸಭೆ ಕಲಾಪದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಹೇಳಿಕೆ ಸಂಬಂಧ ಕ್ಷಮೆ ಕೇಳುವಂತೆ ರಾಹುಲ್ ಗಾಂಧಿಗೆ ಆಗ್ರಹಿಸಿದ್ದರು.

ಆದರೆ ಕ್ಷಮೆ ಕೇಳಲು ನಿರಾಕರಿಸಿರುವ ರಾಹುಲ್ ಗಾಂಧಿ, ಬಿಜೆಪಿಯವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಉನ್ನಾವೋ ಪ್ರಕರಣದಲ್ಲಿ ಆರೋಪಿ ಯಾರು ಅಂತಾ ದೇಶಕ್ಕೆ ಗೊತ್ತಿದೆ.  ಪ್ರಧಾನಿ ಮೋದಿ ಅವರೇ ದೆಹಲಿಯನ್ನ ಅತ್ಯಾಚಾರ ರಾಜಧಾನು ಎಂದಿದ್ದರು. ಅವರ ಹೇಳಿಕೆ ವಿಡಿಯೋ ನನ್ನ ಬಳಿ ಇದೆ. ಅವರ ಹೇಳಿಕೆಯನ್ನ ನಾನು ಹೇಳಿದ್ದೇನೆ ನಾನು ಕ್ಷಮೆ ಕೇಳಲ್ಲ ಎಂದರು.

ಪೌರತ್ವ ಕಾಯ್ದೆ ಮೂಲಕ  ಬಿಜೆಪಿ ಅಸ್ಸಾಂ ರಾಜ್ಯವನ್ನ ಸುಡುತ್ತಿದೆ. ಹೀಗಾಗಿ ಆ ಗಮನವನ್ನ ಬೇರೆಡೆಗೆ ಸೆಳೆಯಲು ಈ ರೀತಿ ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

Key words: Rape in India- Congress leader -Rahul Gandhi – not apologize – statement