8 ಬಾರಿ ಯಶಸ್ವಿಯಾಗಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ‘ಅರ್ಜುನ’ ಇನ್ನಿಲ್ಲ.

ಮೈಸೂರು,ಡಿಸೆಂಬರ್,4,2023(www.justkannada.in): 8 ಬಾರಿ ಯಶಸ್ವಿಯಾಗಿ ಮೈಸೂರು ದಸರಾ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ  ಎಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿಯಿಂದ ಸಾಕಾನೆ ಅರ್ಜುನ ಸಾವನ್ನಪ್ಪಿದ್ದಾನೆ. ಜಂಬೂಸವಾರಿಯಲ್ಲಿ ಅರ್ಜುನ ನಿಶಾನೆಯಾಗಿದ್ದ. 22 ವರ್ಷಗಳ ಕಾಲ ದಸರಾದಲ್ಲಿ  ಅರ್ಜುನ ಭಾಗವಹಿಸಿದ್ದ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಇಂದು ಕಾಡಾನೆ ಸೆರೆ ಎವೆ  ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿಯಿಂದ ಸಾವನ್ನಪ್ಪಿದ್ದಾನೆ. ತಾನು ಸೆರೆಯಾಗಿದ್ದ (ಕಟ್ಟೇಪುರ)ಊರಿನ ಸಮೀಪವೇ( ಯಸಳೂರು) ದಸರಾ ಆನೆ ಅರ್ಜುನ ಕೊನೆಯುಸಿರೆಳೆದಿದ್ದಾನೆ.

 

64 ವರ್ಷದ ಅರ್ಜುನ ಆನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿ ಇತ್ತು. ದಸರೆಯಿಂದ ನಾಲ್ಕು ವರ್ಷದ ಹಿಂದೆ ನಿವೃತ್ತಿ ನೀಡಲಾಗಿತ್ತು. ಅಂಬಾರಿ ಹೊರದೇ ಇದ್ದರೂ ದಸರೆಯಲ್ಲಿ ಭಾಗಿಯಾಗುತ್ತಿತ್ತು. ನಂತರ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು.

Key words: Mysore Dussehra-Arjuna- elephant-  no more.