ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭಾವ ಮಹದೇವಯ್ಯ ಶವವಾಗಿ ಪತ್ತೆ.

ಚಾಮರಾಜನಗರ,ಡಿಸೆಂಬರ್,4,2023(www.justkannada.in):  ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಇಂದು  ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಚಾಮರಾಜನಗರ ಹನೂರು ತಾಲ್ಲೂಕಿನ  ರಾಮಾಪುರ ಬಳಿ ಮಹದೇವಯ್ಯ ಮೃತದೇಹ ಪತ್ತೆಯಾಗಿದೆ.  ಡಿಸೆಂಬರ್ 1ರಂದು ಮಹದೇವಯ್ಯ ತನ್ನ ತೋಟದ ಮನೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ದುಷ್ಕರ್ಮಿಗಳು ಕಿಡ್ನಾಪ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಇದೀಗ ರಾಮಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹದೇವಯ್ಯ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

Key words: Former Minister -CP Yogeshwar- brother-in-law- Mahadeviah -found dead