ಎಲ್ಲರೂ ಮೈಸೂರಿಗೆ ಬಂದು ದಬ್ಬಾಳಿಕೆ ಮಾಡಿ ಆಕ್ಸಿಜನ್ ಕೊಂಡೊಯ್ಯುತ್ತಿದ್ದಾರೆ- ಶಾಸಕ ಜಿ.ಟಿ ದೇವೇಗೌಡ ಆರೋಪ…

ಮೈಸೂರು,ಮೇ,7,2021(www.justkannada.in):   ಇಂತಿಷ್ಟು ಆಕ್ಸಿಜನ್ ನೀಡಬೇಕು ಎಂದು ಜಿಲ್ಲಾವಾರು ನಿಗದಿ ಮಾಡಿಲ್ಲ. ಎಲ್ಲರೂ ಮೈಸೂರಿಗೆ ಬಂದು ದಬ್ಬಾಳಿಕೆ ಮಾಡಿ ಆಕ್ಸಿಜನ್ ಕೊಂಡೊಯ್ಯುತ್ತಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ಆರೋಪ ಮಾಡಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ,  ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಇಂತಿಷ್ಟು ಆಕ್ಸಿಜನ್ ಕೊಡಬೇಕು ಅಂತಾ ನಿಗದಿ ಮಾಡಲಾಗಿದೆ. ಆದ್ರೆ ಜಿಲ್ಲಾವಾರು ನಿಗಧಿ ಮಾಡಿಲ್ಲ. ಅಧಿಕಾರಿಗಳು, ಸರ್ಕಾರ ಎನು ಮಲಗಿದ್ದೆಯಾ..? ಎಂದು ಕಿಡಿಕಾರಿದರು.coming-mysore-carrying-oxygen-mla-gt-deve-gowda

ಎಲ್ಲರೂ ಮೈಸೂರಿಗೆ ಬಂದು ದಬ್ಬಾಳಿಕೆ ಮಾಡಿ ಆಕ್ಸಿಜನ್ ಕೊಂಡೊಯ್ಯುತ್ತಿದ್ದಾರೆ. ಪೊಲೀಸ್ ಪೋರ್ಸ್ ತಂದು ಮೈಸೂರಿನಿಂದ  350ಆಕ್ಸಿಜನ್ ಸಿಲಿಂಡರ್ ಅನ್ನ ಮಂಡ್ಯದ ಉಸ್ತುವಾರಿ ಸಚಿವ ನಾರಾಯಣ ಗೌಡ ತೆಗೆದುಕೊಂಡು ಹೋಗಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: coming –Mysore- carrying- oxygen – MLA- GT Deve Gowda.