ಮೈಸೂರು ಜಿಲ್ಲಾಡಳಿತ ಸಾವುಗಳ ಸಂಖ್ಯೆ ಮುಚ್ಚಿಡುತ್ತಿರುವ ಬಗ್ಗೆ ಅನುಮಾನ‌ ವ್ಯಕ್ತಪಡಿಸಿದ ಶಾಸಕ ಜಿ.ಟಿ ದೇವೇಗೌಡ..

ಮೈಸೂರು,ಮೇ,7,2021(www.justkannada.in): ಮೈಸೂರು ಜಿಲ್ಲಾಡಳಿತ ಸಾವುಗಳ ಸಂಖ್ಯೆ ಮುಚ್ವಿಡುತ್ತಿರುವ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಅನುಮಾನ‌ ವ್ಯಕ್ತಪಡಿಸಿದ್ದಾರೆ.jk

ಮೈಸೂರಿನಲ್ಲಿ ಪ್ರತಿದಿನ ನೂರಾರು ಸಾವುಗಳಾಗುತ್ತಿದೆ..? ಹೂಟಗಳ್ಳಿ ಸ್ಮಶಾನದಲ್ಲಿ 45 ದೇಹವನ್ನ ಸುಡಬಹುದು. ಜಯನಗರದಲ್ಲಿ 35 ದೇಹವನ್ನು ಸುಡಬಹುದು. ಎರಡು ಸ್ಮಶಾನದಲ್ಲಿ ಪ್ರತಿದಿನಅಷ್ಟು ಮೃತದೇಹವನ್ನ ಸುಡಲಾಗುತ್ತಿದೆ. ಇಂದು ನನಗೆ ಗೊತ್ತಿರುವವರೆ 5 ಜನ ಮೃತಪಟ್ಟಿದ್ದಾರೆ. ಬೇಕಿದ್ದರೆ ಸ್ಮಶಾನಕ್ಕೆ ಹೋಗಿ ನೋಡಿದರೆ ಗೊತ್ತಾಗುತ್ತದೆ ಎಂದು ಮೈಸೂರಿನಲ್ಲಿ ಜಿಲ್ಲಾಡಳಿತ ಮುಚ್ಚಿಡುತ್ತಿರುವ ಸಾವಿನ ಸಂಖ್ಯೆ ಬಗ್ಗೆ ಶಾಸಕ ಜಿ.ಟಿ ದೇವೆಗೌಡ ಅನುಮಾನ ವ್ಯಕ್ತಪಡಿಸಿದರು.

Key words: Mysore district –MLA GT Deve Gowda –expressed- doubts – death