“ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ” : ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು,ಮಾರ್ಚ್,11,2021(www.justkannada.in) : ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ತನಿಖೆಯಿಂದ ಎಲ್ಲಾ ಆಯಾಮಗಳು ಗೊತ್ತಾಗುತ್ತವೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.jkಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಿಡಿಯಿಂದ ನನ್ನ ಮಾನಹಾನಿ ಅಗಿದೆ. ಇದರಲ್ಲಿ ಷಡ್ಯಂತ್ರ ಇದೆ. ಇದರ ಹಿಂದೆ ಕೆಲವರು ಇದ್ದಾರೆ. ಆದ್ದರಿಂದ ತನಿಖೆ ಮಾಡಿ ಎಂದು ರಮೇಶ ಜಾರಕಿಹೊಳಿ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ತನಿಖಾ ತಂಡ ರಚಿಸಲಾಗಿದೆ ಎಂದಿದ್ದಾರೆ.

ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು

ಕಳೆದ ಒಂದು ವಾರದ ಬೆಳವಣಿಗೆಗಳನ್ನು ಎಸ್ ಐ ಟಿ ಗಮನ ಹರಿಸುತ್ತಿದೆ. ಎಸ್ ಐ ಟಿ ಗೆ ಸರ್ವ ಸ್ವತಂತ್ರವನ್ನು ನಾವು ಕೊಡಬೇಕಾಗುತ್ತದೆ. ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಆದ್ದರಿಂದ, ಶೀಘ್ರದಲ್ಲಿ ವರದಿ ನೀಡುವಂತೆ ಎಸ್ ಐ ಟಿಗೆ ಸೂಚಿಸಲಾಗಿದೆ. ತನಿಖೆ ನಂತರ ಅಗತ್ಯ ಎನಿಸಿದರೆ ಎಸ್ ಐ ಟಿ , ಎಫ್ ಐ ಆರ್ ದಾಖಲಿಸಿಕೊಳ್ಳಲಿದೆ ಎಂದು ಹೇಳಿದರು.

ಇದು ಫೇಕ್ ಆಗಿದ್ದರೆ, ಫೇಕ್ ಸಿಡಿ ಮಾಡಿದವರು ಯಾರು?

Ramesh Zarakiholi-case-CD-investigate-Special-Investigation-Team-Structure-Minister-Basavaraja Bommai ಇದು ಫೇಕ್ ಆಗಿದ್ದರೆ, ಫೇಕ್ ಸಿಡಿ ಮಾಡಿದವರು ಯಾರು? ಇದರ ಹಿನ್ನೆಲೆ ಯಾರು? ಎಲ್ಲಿ ಆಗಿದೆ ಎಂಬುದರ ಬಗ್ಗೆ ತನಿಖೆ ಆಗಬೇಕು. ಒಟ್ಟಾರೆ ತನಿಖೆಯಿಂದ ಎಲ್ಲಾ ಆಯಾಮಗಳು ಗೊತ್ತಾಗುತ್ತವೆ ಎಂದು ತಿಳಿಸಿದರು.

key words : Ramesh Zarakiholi-case-CD-investigate-Special-Investigation-Team-Structure-Minister-Basavaraja Bommai