ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ‘ಕೈ’ ಶಾಸಕ ಸದನದಿಂದ ಒಂದು ವಾರ ಅಮಾನತು…

kannada t-shirts

ಬೆಂಗಳೂರು,ಮಾರ್ಚ್,4,2021(www.justkannada.in):  ವಿಧಾನಸಭೆ ಕಲಾಪದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಅವರನ್ನ ಒಂದು ವಾರ ಸದನದಿಂದ ಅಮಾನತು ಮಾಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.jk

ಇಂದು ವಿಧಾನಸಭೆ ಕಲಾಪದಲ್ಲಿ ಒಂದು ದೇಶ, ಒಂದೇ ಚುನಾವಣೆ ಕುರಿತು  ಚರ್ಚೆ ನಡೆಯಿತು. ಒನ್ ನೇಷನ್ ಒನ್ ಎಲೆಕ್ಷನ್ ಚರ್ಚೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.  ಈ ವೇಳೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಶರ್ಚ್ ಬಿಚ್ಚಿ ಸದನದಲ್ಲಿ ಪ್ರತಿಭಟನೆ ನಡೆಸಿದರು.

ಸಂಗಮೇಶ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಗೌರವದಿಂದ ನಡೆದುಕೊಳ್ಳಿ. ಕ್ಷೇತ್ರದ ಜನತೆಗೆ ಅಗೌರವ ತರಬೇಡಿ ಅಗೌರವ ತೋರಿದರೇ ಸದನದಿಂದ ಹೊರಗೆ ಕಳುಹಿಸಬೆಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಕೃಪೆ-internet

ಇದೀಗ ಶಾಸಕ ಬಿ.ಕೆ ಸಂಗಮೇಶ್ ಅವರನ್ನ ಸದನದಿಂದ ಒಂದು ವಾರಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಕಾಗೇರಿ ಆದೇಶ ಹೊರಡಿಸಿದ್ದಾರೆ.

 

Key words: one  week- suspended –session- congress MLA-protesting -shirt

website developers in mysore