Tuesday, September 22, 2026

BDA Apartments

ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡುವಂತೆ ಆಗ್ರಹ: ಕಾಂಗ್ರೆಸ್ ಕಚೇರಿಗೆ ಮುತ್ತ...
Home Front Page ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡುವಂತೆ ಆಗ್ರಹ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಯತ್ನ.

ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡುವಂತೆ ಆಗ್ರಹ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಯತ್ನ.

ಬಾಗಲಕೋಟೆ,ಮಾರ್ಚ್,20,2024(www.justkannada.in):  ಬಾಗಲಕೋಟೆ ಕ್ಷೇತ್ರದಿಂದ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಇಂದು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.

ಬಾಗಲಕೋಟೆಯ ನವನಗರದಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ  ವೀಣಾಕಾಶಪ್ಪನವರ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಗೆ ಜಮಾಯಿಸಿದ ವೀಣಾ ಕಾಶಪ್ಪನವರ್ ಬೆಂಬಲಿಗರು ಕಾಂಗ್ರೆಸ್ ಕಚೇರಿಯೊಳಕ್ಕೆ ನುಗ್ಗಲು ‌ ಮುಂದಾಗಿದ್ದು ಈ ವೇಳೆ ಅವರನ್ನು ಪೊಲೀಸರು ತಡೆದಾಗ ಮಾತಿನ ಚಕಮಕಿ ನಡೆಯಿತು.ವೀಣಾ ಕಾಶಪ್ಪನವರ್ ಗೆ ಟಿಕೆಟ್ ನೀಡುವಂತೆ ಆಗ್ರಹ bagalakote

ಹೊರ ಜಿಲ್ಲೆಯವರಿಗೆ ಟಿಕೆಟ್ ನೀಡಬಾರದು. ಐದು ವರ್ಷಗಳ ಕಾಲ ಪಕ್ಷಕ್ಕಾಗಿ ಕೆಲಸ ಮಾಡಿದ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕು ಗೋ ಬ್ಯಾಕ್ ಸಂಯುಕ್ತ ಪಾಟೀಲ್ ಬೇರೆ ಜಿಲ್ಲೆಯವರಿಗೆ ಅವಕಾಶವಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Key words: Demand -ticket Veena Kashappanavar-supporter protest-Congress office.