Tuesday, September 22, 2026

BDA Apartments

ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟ ಬಿಜೆಪಿ ಮುಖಂಡ BD...
Home Front Page ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟ ಬಿಜೆಪಿ ಮುಖಂಡ.

ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟ ಬಿಜೆಪಿ ಮುಖಂಡ.

ಮೈಸೂರು,ನವೆಂಬರ್,25,2021(www.justkannada.in): ನನಗೆ ಸ್ಥಾನಮಾನ ನೀಡುವಲ್ಲಿ ಬಿಜೆಪಿ ಪಕ್ಷ ನಿರ್ಲಕ್ಷ್ಯ ವಹಿಸಿದೆ ಎಂದು ಸ್ವಪಕ್ಷದ ಬಗ್ಗೆಯೇ ಅಸಮಾದಾನ ಬಿಜೆಪಿ ಮುಖಂಡ ಗಿರಿಧರ್ ಅಸಮಾಧಾನ ತೋಡಿಕೊಂಡಿದ್ದಾರೆ.

ಮೈಸೂರಿನಲ್ಲಿ  ಮಾಧ್ಯಮದೆದುರು ಕಣ್ಣೀರಿಟ್ಟು ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಗಿರಿಧರ್, ಪಕ್ಷವನ್ನು ಯಾರೂ ಗುರುತಿಸದ ಕಾಲದಲ್ಲಿ ಪಕ್ಷ ಕಟ್ಟಲು‌‌ ಶ್ರಮಿಸಿದ್ದೇನೆ. 2009ರಲ್ಲಿ ನಡೆದ ಕೋಮು ಗಲಭೆಯಲ್ಲಿ ಬಿಜೆಪಿಗಾಗಿ ರಕ್ತ ಹರಿಸಿದ್ದೇನೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದೇನೆ. ನನಗಾಗಿದ್ದ ಹಲ್ಲೆ ಬೇರೆಯವರಿಗೆ ಆಗಿದ್ದರೆ ಪಕ್ಷ ತೊರೆಯುತ್ತಿದ್ದರು. ಒಬ್ಬ ದಲಿತ ನಾಯಕನಿಗೆ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಬೇರೆ ಪಕ್ಷದಿಂದ ಬಂದವರಿಗೆ ಪರಿಷತ್ ಟಿಕೆಟ್ ನೀಡಿದ್ದಾರೆ. ನನಗೆ ನಿಗಮ ಮಂಡಳಿಯ ಸ್ಥಾನಮಾನವನ್ನಾದರೂ ಕೊಡಿ ಎಂಬುದು ನನ್ನ ಒತ್ತಾಯ. 10 ದಿನದೊಳಗೆ ಯಾವುದೇ ಸ್ಥಾನಮಾನ ನೀಡದಿದ್ರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ ಗಿರಿಧರ್  ಹೇಳಿದ್ದಾರೆ.

Key words: Resentment – BJP-leader-mysore