ರಾಜೀವ್ ಗಾಂಧಿ ಆರೋಗ್ಯ ವಿವಿ ಬೆಳ್ಳಿಹಬ್ಬಕ್ಕೆ ಚಾಲನೆ:  ಕರ್ನಾಟಕ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ…

ಬೆಂಗಳೂರು,ಜೂ,1,2020(www.justkannada.in): ಕರ್ನಾಟಕ ಸರ್ಕಾರ ಸಮರ್ಥವಾಗಿ ಮಹಾಮಾರಿ ಕೊರೋನಾವನ್ನ ಎದುರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿ ದನ್ವಂತರಿ ಸಭಾಂಗಣದಲ್ಲಿ ಬೆಳ್ಳಿಹಬ್ಬ ಉದ್ಘಟನಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ರಾಜ್ಯಪಾಲ ವಜುಭಾಯಿ ವಾಲಾ, ಸಿಎಂ ಬಿಎಸ್ ಯಡಿಯೂರಪ್ಪ ಸೇರಿ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.Rajiv Gandhi Health university- Founding Day-Prime Minister Modi -praises -Karnataka government

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ವಿರುದ್ದ ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಹೋರಾಡುತ್ತಿದೆ. ಎಂದು ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಕೊರೋನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ. ಕಣ್ಣಿಗೆ ಕಾಣಿಸಿದ ವೈರಸ್ ವಿರುದ್ದ ಹೋರಾಡುತ್ತಿದ್ದಾರೆ. ವೈದ್ಯರು ನರ್ಸ್ ಗಳ ಮೇಲಿನ ಗೌರವ ಹೆಚ್ಚಿದೆ. ವೈದ್ಯ ಸಿಬ್ಬಂದಿಯ ಶ್ರಮ ಕಣ್ಣಿಗೆ ಕಾಣಿಸುತ್ತಿದೆ. ವೈದ್ಯರು ನರ್ಸ್ ಜೀವ ಕಾಪಾಡುವ ಯೋಧರು ಎಂದು ನುಡಿದರು.

ಕಳೆದ 6 ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೆಡಿಕಲ್ ಶಿಕ್ಷಣದಲ್ಲಿ ದೊಡ್ಡ ಸುಧಾರಣೆ ಆಗಿದೆ. ಕೊರೋನಾ ವಿರುದ್ದ ಭಾರತ ಹೋರಾಡುತ್ತಿದೆ. 2025ರ ವೇಳೆಗೆ ಕ್ಷಯ ಮುಕ್ತ ಭಾರತ ಮಾಡುತ್ತೇವೆ. ಈ ಕೊರೋನಾ ಸಂದರ್ಭದಲ್ಲಿ ಮಾನವೀಯತೆ ಜತೆ ಅಭಿವೃದ್ಧಿ ಕತೆ ನಾವು ಗಮನ ಕೊಡಬೇಕು ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

Key words: Rajiv Gandhi Health university- Founding Day-Prime Minister Modi -praises -Karnataka government