Thursday, August 13, 2026

BDA Apartments

Home Cinema ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಮದನ್ ಪಟೇಲ್

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಮದನ್ ಪಟೇಲ್

ಬೆಂಗಳೂರು:ಜೂ-6:(www.justkannada.in) ದೊಮ್ಮಲೂರು ಸಮೀಪದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಟ ಮದನ್ ಪಟೇಲ್ ತಮಗೆ ರಕ್ಷಣೆ ನೀಡುವಂತೆ ಕೋರಿ ಪೊಲಿಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ.

ನಟ ಮದನ್ ದೊಮ್ಮಲೂರು ಮುಖ್ಯ ರಸ್ತೆಯ ಸಮೀಪದಲ್ಲಿ ಗೀತಾ ಮಂಜುನಾಥ್ ಎಂಬವರಿಗೆ ಸೇರಿದ್ದ ಬಿಡಿಎ ಸೈಟ್ ಖರೀದಿಸಿದ್ದರು. ಖರೀದಿ ವೇಳೆ ಮಗ ನಟ ಮಯೂರ್ ಪಟೇಲ್, ಪತ್ನಿ ರೇಖಾ ಕೂಡ ಇದ್ದರು. ಆದರೆ ಈಗ ಜಾಗ ಮಾರಿದ ಗೀತಾ ಅವರೇ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂದು ಮದನ್ ಪಟೇಲ್ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜಮೀನು ನೀಡಿದ ಗೀತಾ ಹಾಗೂ ಮಂಜುನಾಥ್ ಅವರು ಬೆದರಿಕೆ ಹಾಕುತ್ತಿದ್ದು, ಶ್ರೀನಿವಾಸ್ ಎಂಬುವವರಿಂದಲೂ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಮಗೆ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಮದನ್ ಪಟೇಲ್ ಕುಟುಂಬ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಮದನ್ ಪಟೇಲ್
Sandalwood,Actor Madan Patel,threat,woman