ಭಾರತದ ಭಗೀರಥ ಪ್ರಧಾನಿ ಮೋದಿಯಿಂದ ಪ್ರೇರಣೆಗೊಂಡು ವಿದ್ಯಾನಿಧಿ ಯೋಜನೆ ಜಾರಿ-ಸಿಎಂ ಬೊಮ್ಮಾಯಿ ಗುಣಗಾನ.

ಬೆಳಗಾವಿ,ಫೆಬ್ರವರಿ,27,2023(www.justkannada.in): ಭಾರತದ ಭಗೀರಥ ಪ್ರಧಾನಿ ಮೋದಿ ಅವರು ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರಿಂದ ಪ್ರೇರಣೆಗೊಂಡು ರಾಜ್ಯದಲ್ಲಿ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಣಗಾನ ಮಾಡಿದರು.

ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಚಾಲನೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರಧಾನಿ ಮೋದಿ ಅವರು ದೇಶದ 8ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನ ಬಿಡುಗಡೆ ಮಾಡಿದರು. ರಾಜ್ಯದ 49 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಹಣ ಸಿಗಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿಯಲ್ಲಿ ಇಂದು ಹೊಸ ದಾಖಲೆ ನಿರ್ಮಾಣವಾಗಿದೆ. ಬೆಳಗಾವಿಯಲ್ಲಿ ಇಂತಹ ಸಮಾವೇಶ ಹಿಂದೆಯೂ ಆಗಿಲ್ಲ. ಮುಂದೆಯೂ ಆಗಲ್ಲ. ಪ್ರಧಾನಿ ಮೋದಿ ಭಾರತದ ಭಗೀರಥ. ಮೋದಿಯಿಂದ ಬೆಳಗಾವಿಗೆ ಬೆಳಕು ಬಂದಿದೆ.  ಭಾರತದ ಪರಿವರ್ತನೆಯ ಸಂಕಲ್ಪ ಮಾಡಿದ್ದಾರೆ. ಪ್ರಧಾನಿಗೆ ನೀವು ನೀಡಿದ ಪ್ರೀತಿ ವಿಶ್ವಾಸ ಅವಿಸ್ಮರಣೀಯವಾದ್ದುದ್ದು ಎಂದರು.

ರೈತರಪರವಾಗಿ ಯೋಜನೆ ಮಾಡಿದ್ದು ಮೋದಿ. ಮೋದಿಯಿಂದ ಪ್ರೇರಣೆಗೊಂಡು ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಈ ವರ್ಷ ಭೂಸಿರಿ ಯೋಜನೆ ಜಾರಿ ಮಾಡಿದ್ದೇವೆ   ನಮ್ಮ ಸರ್ಕಾರ ಜನಹಿತ ಕೆಲಸ ಮಾಡುತ್ತಿದೆ. ಪ್ರದಾನ್ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ನಮ್ಮ ಸರ್ಕಾರ ರಸ್ತೆ ರೈಲ್ವೆ ಸೌಲಭ್ಯದ ಜೊತೆಗೆ ನೀರಿನ ಸೌಲಭ್ಯ ನೀಡಿದೆ . ಜಲ ಜೀವನ್ ಮಿಷನ್ ಮೂಲಕ ಮನೆ ಮನೆಗೆ ನೀರು ನೀಡಲಾಗುತ್ತಿದೆ. ಎಂದು ಸಿಎಂ ಬೊಮ್ಮಾಯಿ ಹೇಳಿದರು.

Key words: Implementation -Vidyanidhi -scheme –inspired-PM-Modi-CM Bommai