‘ದರ್ಬಾರ್‌’ಗೆ ರಜನಿ ಪಡೆದ ಸಂಭಾವನೆ ಬರೋಬ್ಬರಿ 108 ಕೋಟಿ ರೂ.

Promotion

ಬೆಂಗಳೂರು, ಜನವರಿ 14, 2020 (www.justkannada.in): ರಜನಿಕಾಂತ್‌ ಅಭಿನಯದ ‘ದರ್ಬಾರ್‌’ ಚಿತ್ರ ಭಾರಿ ಯಶಸ್ಸು ಗಳಿಸಿದೆ.

ಬಿಡುಗಡೆಯಾದ ಎರಡೇ ದಿನದಲ್ಲಿ 75 ಕೋಟಿ ಗಳಿಸಿದೆ. ಈಗ ಈ ಚಿತ್ರದಲ್ಲಿ ಅಭಿನಯಕ್ಕಾಗಿ ಲೈಕಾ ಪ್ರೊಡಕ್ಷನ್‌ ಭಾರಿ ಮೊತ್ತದ ಸಂಭಾವನೆಯನ್ನು ರಜನಿಕಾಂತ್‌ಗೆ ನೀಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಈ ಚಿತ್ರಕ್ಕೆ ರಜನಿಕಾಂತ್‌ ಪಡೆದ ಸಂಭಾವನೆ ಕುರಿತ ಸುದ್ದಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರು ಪಡೆದ ಒಟ್ಟು ಸಂಭಾವನೆ 108 ಕೋಟಿ ರೂ. ಎನ್ನಲಾಗಿದೆ.

ಬಿಡುಗಡೆ ದಿನದಿಂದಲೇ ‘ದರ್ಬಾರ್‌’ ಚಿತ್ರ ಉತ್ತಮ ಆರಂಭ ಮಾಡಿದೆ. ಮುಂದಿನ ಕೆಲ ವಾರಗಳ ತನಕ ಥಿಯೇಟರ್‌ಗಳಲ್ಲಿ ರಜನಿಕಾಂತ್‌ ಹವಾ ಮುಂದುವರಿಯಲಿದೆ.