Saturday, August 22, 2026

BDA Apartments

Home Front Page ಕಲ್ಯಾಣ ಕರ್ನಾಟಕ ಭಾಗಕ್ಕೆ ಎರಡರಿಂದ ಮೂರು ಸಚಿವ ಸ್ಥಾನ ನೀಡಿ- ಬಿಜೆಪಿ ಶಾಸಕ ಆಗ್ರಹ…

ಕಲ್ಯಾಣ ಕರ್ನಾಟಕ ಭಾಗಕ್ಕೆ ಎರಡರಿಂದ ಮೂರು ಸಚಿವ ಸ್ಥಾನ ನೀಡಿ- ಬಿಜೆಪಿ ಶಾಸಕ ಆಗ್ರಹ…

ಕೊಪ್ಪಳ,ಜ,14,2020(www.justkannada.in):  ಸಚಿವ ಸಂಪುಟ ವಿಸ್ತರಣೆ ವೇಳೆ ಕಲ್ಯಾಣ ಕರ್ನಾಟಕ ಭಾಗವನ್ನ ಪರಿಗಣಿಸಿ ಈ ಭಾಗಕ್ಕೆ ಎರಡರಿಂದ ಮೂರು ಸಚಿವ ಸ್ಥಾನವನ್ನ ನೀಡಬೇಕು ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಆಗ್ರಹಿಸಿದ್ದಾರೆ.

ಇಂದು ಗಂಗಾವತಿಯಲ್ಲಿ ಮಾತನಾಡಿದ ಪರಣ್ಣ ಮುನವಳ್ಳಿ, ನಾನು  ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ.  ಕಲ್ಯಾಣ ಕರ್ನಾಟಕ ಭಾಗಕ್ಕೆ  ಎರಡರಿಂದ ಮೂರು ಸಚಿವ ಸ್ಥಾನ ನೀಡಿಬೇಕು ಎಂದು ಒತ್ತಾಯಿಸಿದರು.

ನಾನು ಪಕ್ಷದ ಶಿಸ್ತಿನ ಸಿಪಾಯಿ. ನನಗೆ ಸಚಿವ ಸ್ಥಾನ ನೀಡದಿದ್ದರೂ ಬೇಜಾರು ಮಾಡಿಕೊಳ್ಳಲ್ಲ. ಪಕ್ಷ ಏನು ಹೇಳುತ್ತದೆಯೇ ಅದನ್ನ ಕೇಳುತ್ತೇವೆ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಿಎಂ ಬಿಎಸ್ ಯಡಿಯೂರಪ್ಪಗೆ ಕಗ್ಗಂಟಾಗಿದ್ದು, ಸಚಿವ ಸ್ಥಾನಕ್ಕಾಗಿ ಬಿಜೆಪಿಯ ಹಲವು ಶಾಸಕರು ಲಾಬಿ ನಡೆಸುತ್ತಿದ್ದಾರೆ.  ಉಪಚುನಾವಣೆಯಲ್ಲಿ ಗೆದ್ದ 11 ಮಂದಿಗೂ ಸಚಿವ ಸ್ಥಾನ ನೀಡುತ್ತೇವೆ ಎಂದು ಸಿಎಂ ಬಿಎಸ್ ವೈ ಭರವಸೆ ನೀಡಿದ್ದಾರೆ. ಇನ್ನು ದಾವೋಸ್ ಪ್ರವಾಸಕ್ಕೆ ಹೋಗುವ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿರುವ ಬಿಎಸ್ ವೈ ಈ ಬಗ್ಗೆ ರಾಜ್ಯಕ್ಕೆ ಅಮಿತ್ ಶಾ ಬಂದ ವೇಳೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದಿದ್ದಾರೆ.

Key words: Give -two to three- ministerial posts –kalyan  Karnataka-BJP MLA -demands.