Tuesday, October 27, 2026

Dasara Wishes

Happy Dasara
Home Front Page ಬಿಜೆಪಿ ನಾಯಕರು ಅಫೀಮು ಸೇವಿಸಿರೋದನ್ನ ನೀವು ನೋಡಿದ್ರಾ..? ಬಿ.ಕೆ.ಹರಿಪ್ರಸಾದ್ ಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು…

ಬಿಜೆಪಿ ನಾಯಕರು ಅಫೀಮು ಸೇವಿಸಿರೋದನ್ನ ನೀವು ನೋಡಿದ್ರಾ..? ಬಿ.ಕೆ.ಹರಿಪ್ರಸಾದ್ ಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು…

ಬೆಂಗಳೂರು,ಸೆಪ್ಟೆಂಬರ್,13,2020(www.justkannada.in): ಬಿಜೆಪಿ ನಾಯಕರು ಡ್ರಗ್ಸ ಸೇವಿರುತ್ತಾರೆ ಎಂದು ಆರೋಪಿಸಿದ್ದಾರೆ. ಹಾಗಾದರೇ ಬಿಜೆಪಿ ನಾಯಕರು ಅಫೀಮು ಸೇವಿಸಿರೋದು ನೋಡಿದ್ರಾ…? ನೋಡಿದರೆ ಮೊದಲೇ ಹೇಳಬೇಕಿತ್ತು. ಸುಮ್ಮನೆ ಯಾಕೆ ಆರೋಪ ಮಾಡುವುದು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವಿರುದ್ಧ  ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

 

jk-logo-justkannada-logo

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಕೇಂದ್ರ ಮತ್ತು ರಾಜ್ಯ ಸರಕಾರ ತಮ್ಮ ವೈಫಲ್ಯಗಳನ್ನು ಮುಚ್ಚಿ ಕೊಳ್ಳಲು ಡ್ರಗ್ಸ್ ಮಾಫಿಯಾವನ್ನು ದೊಡ್ಡ ಮಟ್ಟದಲ್ಲಿ ಚರ್ಚೆಗೆ ತರಲಾಗಿದೆ ಎಂಬ ಆರೋಪಕ್ಕೆ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಬಿ.ಕೆ.ಹರಿಪ್ರಸಾದ್ ಏನು ಬ್ರಹ್ಮ ಅಲ್ಲ. ಬಿಎಸ್ ವೈ ಸಿಎಂ ಆದ ಬಳಿಕ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಲ್ಲಿ ಸರಕಾರದ ವೈಫಲ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

BJP,leaders,consumedopium,Minister B.C. Patil,sparked

ಬಿಜೆಪಿ ನಾಯಕರು ಡ್ರಗ್ಸ ಸೇವಿರುತ್ತಾರೆ ಎಂದು ಆರೋಪಿಸಿದ್ದು, ಬಿಜೆಪಿ ನಾಯಕರು ಅಫೀಮು ಸೇವಿಸುವುದು ಹರಿಪ್ರಸಾದ್ ನೋಡಿದ್ರಾ… ನೋಡಿದರೆ ಮೊದಲೇ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

key words : BJP-leaders-consumedopium-Minister B.C. Patil-sparked