ಬೆಲೆ ಏರಿಕೆ ಹಿನ್ನೆಲೆ: ಬೀದಿ ಹೋರಾಟಕ್ಕೆ ಇಳಿಯುವಂತೆ ವಾಟಾಳ್ ನಾಗರಾಜ್ ಕರೆ.

ಮೈಸೂರು,ಅಕ್ಟೋಬರ್,24,2021(www.justkannada.in): ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಸಮಾನ ಮನಸ್ಕರರೆಲ್ಲಾ ಬೀದಿ ಹೋರಾಟಕ್ಕೆ ಮುಂದಾಗಿ ಎಂದು  ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದರು.

ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ  ಮಾತನಾಡಿದ ವಾಟಾಳ್ ನಾಗರಾಜ್. ಸಿಂದಗಿ ಹಾನಗಲ್ ಉಪ ಚುನಾವಣೆ ವಿಚಾರ. ಇದು ಉಪ ಚುನಾವಣೆಯಲ್ಲ. ಮತದಾರರ ಮೇಲೆ ನಡೆಯುತ್ತಿರುವ ದರೋಡೆ. ಒಬ್ಬರ ಮೇಲೊಬ್ಬರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಹಣ ಹೊಳೆ ಹರಿಸುತ್ತಿದ್ದಾರೆ. ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಮತದಾರರು ಎಚ್ಚೆತ್ತುಕೊಳ್ಳಬೇಕಿದೆ. ಪೆಟ್ರೋಲ್, ಡೀಸೆಲ್‌, ಗ್ಯಾಸ್ ಬೆಲೆ ಏರಿಕೆ ಆಗ್ತಿದೆ. ಆದರೆ ಮೋದಿ ನೂರು ಕೋಟಿ ಡೋಸ್ ಕೊಟ್ಟಿದ್ದೀವಿ ಅಂತಾ ಹೇಳುತ್ತಿದ್ದಾರೆ.

ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇದೀಗ ಸೀಮೆಎಣ್ಣೆಯ ಬೆಲೆ ಜೊತೆಗೆ, ಲಭ್ಯತೆಯು ಸಹ ಇಲ್ಲದಾಗಿದೆ. ಇದರ ವಿರುದ್ಧ ಬೀದಿ ಹೋರಾಟ ಆಗಬೇಕು. ಸಮಾನ ಮನಸ್ಕರರೆಲ್ಲಾ ಬೀದಿ ಹೋರಾಟಕ್ಕೆ ಮುಂದಾಗಿ ಎಂದು ಕರೆ ನೀಡಿದರು.

ಮಣ್ಣಿನ ಮಕ್ಕಳಿಗೆ ಉದ್ಯೋಗ ಆದ್ಯತೆಗೆ ಒತ್ತಾಯಿಸಿದ  ವಾಟಾಳ್ ನಾಗರಾಜ್ ಸರೋಜಿನಿ ಮಹಿಷಿ ವರದಿ ತಿದ್ದುಪಡಿಗೆ ಆಗ್ರಹಿಸಿದರು.

Key words: Price rise-  Vatal Nagaraj -calls – street fight.