Saturday, September 12, 2026

BDA Apartments

ಶಾಸಕ ಜಿಟಿ ದೇವೆಗೌಡರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ವಿಚಾರ: ಮಾಜಿ ಸಿಎಂ ಹೆಚ...
Home Front Page ಶಾಸಕ ಜಿಟಿ ದೇವೆಗೌಡರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ವಿಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ.

ಶಾಸಕ ಜಿಟಿ ದೇವೆಗೌಡರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ವಿಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ.

ಮೈಸೂರು,ಅಕ್ಟೋಬರ್,24,2021(www.justkannada.in):  ಶಾಸಕ ಜಿ.ಟಿ ದೇವೇಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಈಗಾಗಲೇ ಸುಳುವು ನೀಡಿದ್ದಾರೆ. ಈ ಮಧ್ಯೆ ಜಿ.ಟಿ ದೇವೇಗೌಡರನ್ನ ಜೆಡಿಎಸ್ ಪಕ್ಷದಲ್ಲೇ ಉಳಿಸಿಕೊಳ್ಳುವ ಕುರಿತು ಹಾಗೂ ನಿನ್ನೆ ಜಿಡಿ ದೇವೇಗೌಡರ ಪುತ್ರ ಹರೀಶ್ ಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಒಟ್ಟಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಒಮ್ಮೊಮ್ಮೆ ಮಕ್ಕಳ‌ ಮಾತನ್ನು ಕೂಡ ಕೇಳಬೇಕಾಗುತ್ತದೆ. ನನ್ನ ಮಗ, ಜಿಟಿ ದೇವೇಗೌಡರ ಮಗ, ಮಹದೇವು ಮಗ ಸಮಕಾಲೀನರು ಸ್ನೇಹಿತರು. ಅವರು ಏನೇನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಜಿಟಿ ದೇವೇಗೌಡರನ್ನ ಉಳಿಸಿಕೊಳ್ಳುವ ಪ್ರಶ್ನೆ ಬಂದಾಗ ಏನ್ ಹೇಳಬೇಕು ಆ ವೇಳೆ ಉತ್ತರ ಕೊಡ್ತಿನಿ. ನನ್ನ ಮಗ ಮತ್ತು ಅವರ  ಮಗ ಏನ್ ಮಾತಾಡಿದ್ದಾರೆ ಅದು ಅವರಿಗೆ ಗೊತ್ತು. ಈ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

Key words: MLA -GT Deve Gowdaran- party- Former CM -HD Kumaraswamy -mysore