ಮೈಸೂರಿನಲ್ಲಿ ಮಳೆ ಆರ್ಭಟ: ನೋಡನೋಡುತ್ತಿದ್ದ ಮೋರಿ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ

ಮೈಸೂರು, ಅಕ್ಟೋಬರ್ 25, 2021 (www.justkannada.in): ಮೈಸೂರಿನಲ್ಲಿ ಮಳೆಯ ಆರ್ಭಟಕ್ಕೆ ವ್ಯಕ್ತಿಯೊಬ್ಬರು ಮೋರಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಕುಟುಂಬಸ್ಥರ ಕಣ್ಣೇದುರು ವ್ಯಕ್ತಿಯೊಬ್ಬರು ನೀರುಪಾಲಾಗಿದ್ದಾರೆ. ನೀರು ನೋಡುತ್ತಿದ್ದ ವೇಳೆ ಕಾಲು ಜಾರಿ ಮೋರಿಯಲ್ಲಿ ಕೊಚ್ಚಿಹೋದ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನಡೆದಿದೆ.

ಸಿದ್ಧಾರ್ಥ ನಗರದ ವಿನಯ ಮಾರ್ಗದ ನಿವಾಸಿ ಎಂ.ಚಂದ್ರೇಗೌಡ(60) ನೀರಿನಲ್ಲಿ ಕೊಚ್ಚಿಹೋದವರು. ಮನೆ ಪಕ್ಕದ ಮೋರಿಯಲ್ಲಿ ನಿಂತು ನೀರು ವೀಕ್ಷಣೆ ಮಾಡುತ್ತಿದ್ದ ಚಂದ್ರೇಗೌಡ ಅವರು ಕಾಲುಜಾರಿ ಮೋರಿಗೆ ಬಿದ್ದಿದ್ದಾರೆ.

ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕುಟುಂಬಸ್ಥರ ಮಾಹಿತಿ ಸಿಕ್ಕಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ಸುಳಿವು ಸಿಕ್ಕಿಲ್ಲ. ಮೈಸೂರಿನ ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ದುರ್ಘಟನೆ ನಡೆದಿದೆ.