ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ: ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ಧ ಶಿವಸೇನೆ ಶಾಸಕರು.

ಮುಂಬೈ,ಜೂನ್,21,2022(www.justkannada.in): ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ  ಹೈಡ್ರಾಮಾ ನಡೆದಿದ್ದು, ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ 21 ಶಾಸಕರು ಬಂಡಾಯ ಎದ್ಧಿದ್ದಾರೆ ಎನ್ನಲಾಗಿದೆ.

ಸಿಎಂ ಉದ‍್ಧವ್ ಠಾಕ್ರೆ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ನಗರಾಭಿವೃದ‍್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ 21 ಶಾಸಕರು ಬಂಡಾಯ ಎದ್ದಿದ್ದಾರೆ ಎನ್ನಲಾಗಿದೆ. ಈ ಮೂಲಕ ಶಿವಸೇನಾ, ಕಾಂಗ್ರೆಸ್​ ಮತ್ತು ನ್ಯಾಷನಲ್​ ಕಾಂಗ್ರೆಸ್​ ಪಾರ್ಟಿಗಳು ಸೇರಿಕೊಂಡು ರಚನೆ ಮಾಡಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಇದೀಗ ಬಿರುಕು ಮೂಡಿದೆ.

ಏಕನಾಥ್​ ಶಿಂಧೆ ಅವರು ತಮ್ಮ ಪಕ್ಷದ 21 ಶಾಸಕರ ಜತೆ ಗುಜರಾತಿನ ಹೋಟೆಲ್ ​ಗೆ ಹೋಗಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಮಹಾ ಅಘಾಡಿ ಸರ್ಕಾರದಿಂದ ಅಸಮಾಧಾನಗೊಂಡಿರುವ ಶಿಂಧೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ನನ್ನ ಬಳಿ 21 ಶಾಸಕರು ಇದ್ದಾರೆ ಎಂದು ಏಕನಾಥ್ ಸಿಂಧೆ ತಿಳಿಸಿದ್ದು, ಇಂದು ಮಧ್ಯಾಹ್ನದ  ವೇಳೆಗೆ ಏಕನಥ್ ಶಿಂಧೆ  ಸುದ‍್ಧಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ.

Key words: Political Hydrama – Maharashtra –Rebel- Shiv Sena-MLAs – CM Uddhav Thackeray