ಎರಡು ದಿನಗಳ ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ತೆರಳಿದ ಪ್ರಧಾನಿ ಮೋದಿ.

ಬೆಂಗಳೂರು,ಜೂನ್,21,2022(www.justkannada.in): ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡು  ವಿವಿಧ ಯೋಜನೆಗಳಿಗೆ ಚಾಲನೆ ಶಂಕು ಸ್ಥಾಪನೆ ನೆರವೇರಿಸಿ ಇಂದು ಬೆಳಿಗ್ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ಧ ಪ್ರಧಾನಿ ನರೇಂದ್ರ ಮೋದಿ ಇದೀಗ ರಾಜ್ಯಪ್ರವಾಸ ಮುಗಿಸಿ ದೆಹಲಿಯತ್ತ ಹೊರಟಿದ್ದಾರೆ.

ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ್ಧ ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮ, ಯೋಜನೆಗಳಿಗೆ ಚಾಲನೆ ನೀಡಿ ಬಳಿಕ ಸಂಜೆ 5.30ರ ವೇಳೆಗೆ ಮೈಸೂರಿಗೆ ಆಗಮಿಸಿದ್ಧರು. ಮೈಸೂರಿನಲ್ಲಿ ಕೇಂದ್ರ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸಾರ್ವಜನಿಕ ವೇದಿಕೆಯಲ್ಲಿ ಭಾಷಣ ಮಾಡಿದ್ದರು. ಇದಾದ ಬಳಿಕ ಸುತ್ತೂರು ಮಠಕ್ಕೆ ಭೇಟಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ದೇಶದ ಒಳಿತಿಗಾಗಿ ಪ್ರಾರ್ಥಿಸಿದ್ದರು.

ನಂತರ ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಿ ಬೆಳಿಗ್ಗೆ 6.30ರವೇಳೆಗೆ ಅರಮನೆ ಆವರಣದಲ್ಲಿ ಆಯೋಜಿಸಿದ್ಧ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೈಸೂರು ಜನತೆಯ ಜೊತೆ ಯೋಗ ಪ್ರದರ್ಶನ ಮಾಡಿದರು.

ಇದಾದ ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಹ್ವಾನದ ಮೇರೆಗೆ ಮೈಸೂರು ಅರಮನೆಯಲ್ಲಿ ಉಪಹಾರ ಸೇವಿಸಿದರು. ಅರಮನೆಯ ಆತಿಥ್ಯ ಸ್ವೀಕರಿಸಿದ ಪ್ರಧಾನಿ ಮೋದಿ ಈ ಮೂಲಕ ರಾಜ್ಯದ ಎರಡು ದಿನಗಳ ಪ್ರವಾಸ ಮುಗಿಸಿ ಕರುನಾಡಿನ ಜತೆಗೆ ಕೈಮುಗಿದು ಮಂಡಕಳ್ಳಿ ಏರ್ ಪೋರ್ಟ್ ನತ್ತ ತೆರಳಿದ್ದು ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.

Key words: Prime Minister -Modi – completing -two-day- state tour.

ENGLISH SUMMARY…

PM Modi returns to Delhi after two day visit to Karnataka
Bengaluru, June 21, 2022 (www.justkannada.in): Prime Minister Narendra Modi, who was in Karnataka on a two-day visit to dedicate several projects to the nation and attend several other programs, returned to Delhi today.
The Prime Minister arrived at Bengaluru yesterday afternoon, and attended several programs and inaugurated several projects. He arrived at Mysuru at 5.30 pm. He participated in an interaction program with the beneficiaries of several Central Govt. programs and schemes and also addressed a public program. Later, he visited Suttur Math, and after that he visited Chamundi hills and performed special pooja to goddess Chamundeshwari.
He stayed in Mysuru and attended the International Day of Yoga program organized at the palace premises at 6.30 am. He had breakfast with the royal family upon invitation from Rajamata Pramodadevi Wadiyar. Later he left to Mandakalli airport from where he will left to Delhi.
Keywords: Prime Minister Narendra Modi/ Two-day state visit/ returns to Delhi