2 ತಾಸಿನಲ್ಲಿ ಮುಗಿಯಬೇಕಿದ್ಧ ವಿಚಾರಣೆ 40 ಗಂಟೆವರೆಗೆ ; ನನಗಿಂತ ರಾಹುಲ್ ಗಾಂಧಿಗೆ ಹೆಚ್ಚು ಕಿರುಕುಳ- ಡಿ.ಕೆ ಶಿವಕುಮಾರ್ ಕಿಡಿ.

ನವದೆಹಲಿ,ಜೂನ್,21,2022(www.justkannada.in):  ಎರಡು ತಾಸಿನಲ್ಲಿ ಮುಗಿಯಬೇಕಿದ್ಧ ವಿಚಾರಣೆಯನ್ನ 40 ಗಂಟೆಗಳ ಕಾಲ ಮಾಡಿದ್ದಾರೆ. ನನಗಿಂತ ರಾಹುಲ್ ಗಾಂಧಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದರು.

ಇಡಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ಇಂದು ಮುಂದುವರೆದಿದ್ದು ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ಈವರೆಗೂ 40 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಕೇವಲ 2 ಗಂಟೆ   ವಿಚಾರಣೆ ಮುಗಿಸಬಹುದಾದ ಪ್ರಕರಣ ಇದು. ಆದರೆ ಕೇವಲ ಕಿರುಕುಳ ನೀಡುವುದಕ್ಕಾಗಿಯೇ ವಿಚಾರಣೆ ನಡೆಸಿದ್ದಾರೆ ನನಗಿಂತ ಹೆಚ್ಚು ರಾಹುಲ್ ಗಾಂಧಿಗೆ ಕಿರುಕುಳ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು .

ಇಡಿ ವಿಚಾರಣೆಯನ್ನ ನಾವು ಅನುಭವಿಸಿದ್ದೇವೆ.  ನನ್ನ ಕುಟುಂಬಕ್ಕೂ ಸಾಕಷ್ಟು ಹಿಂಸೆ ನೀಡಿದ್ದಾರೆ. ಸೋನಿಯಾ ಗಾಂಧಿ ಏನು ತಪ್ಪು ಮಾಡಿದ್ದಾರೆ. ಯಾಕಿಷ್ಟು ಕಿರುಕುಳ  ನೀಡುತ್ತಿದ್ದಾರೆ. ದೆಹಲಿಯಲ್ಲಿ ನಾವು ಕೂಡ ಬೆಂಬಲಕ್ಕೆ ಬಂದಿದ್ದೇವೆ ದೆಹಲಿಯಲ್ಲೂ ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words:ED-Hearing- Rahul Gandhi – persecuted- DK Shivakumar