Wednesday, November 4, 2026

Dasara Wishes

Happy Dasara
Home Crime ಗಾಂಜಾ ಮಾರಲು ಯತ್ನಿಸಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರ ಬಂಧನ : 13 ಲಕ್ಷ ಮೌಲ್ಯದ...

ಗಾಂಜಾ ಮಾರಲು ಯತ್ನಿಸಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರ ಬಂಧನ : 13 ಲಕ್ಷ ಮೌಲ್ಯದ ಮಾದಕ ವಸ್ತು ವಶ….

ಬೆಂಗಳೂರು,ಸೆಪ್ಟಂಬರ್,7,2020(www.justkannada.in):  ಗಾಜಾ ಮಾರಾಟ ಮಾಡಲು ಯತ್ನಿಸಿದ್ದ ನೈಜೀರಿಯನ್ ಪ್ರಜೆ ಸೇರಿ ಇಬ್ಬರನ್ನು ಬೆಂಗಳೂರಿನ ಹನುಮಂತನಗರ ಠಾಣಾ ಪೊಲೀಸರು ಬಂಧಿಸಿ 13 ಲಕ್ಷ ಮೌಲ್ಯದ ಮಾದಕವಸ್ತುವನ್ನು ವಶಕ್ಕೆ ಪಡೆದಿದ್ದಾರೆ.two-arrested-selling-marijuana-foreign-arrest-bangalore

ನೈಜೀರಿಯನ್ ಪ್ರಜೆ ಜಾನ್(35), ಹಾಗೂ  ಸ್ಯಾಮ್ ಸನ್ ಬಿನ್ ಸಗಾಯಿ ರಾಜ್(24) ಬಂಧಿತ ಆರೋಪಿಗಳು. ಬಂಧಿತರಿಂದ 2.5 ಕೆ.ಜಿ ಗಾಂಜಾ, 20 ಗ್ರಾಂ ತೂಕದ  ಎಂಡಿಎಂಎ ಡ್ರಗ್ಸ್, ಸುಮಾರು 5.15 ಗ್ರಾಂ ತೂಕದ  10 ECSTASY Pills, ಸುಮಾರು  530 ಗ್ರಾಂ ತೂಕದ ಹ್ಯಾಶಿಶ್ ಆಯಿಲ್ ಸೇರಿ ಒಟ್ಟು 13 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆಗೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಶೋಕನಗರ, ಬಿಎಂಎಸ್ ಇಂಜಿನಿಯರಿಂಗ್ ಹಾಸ್ಟೆಲ್ ಬಳಿ ಇಬ್ಬರು ಆರೋಪಿಗಳು ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹನುಮಂತನಗರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Key words: Two -arrested –selling- marijuana- foreign-arrest- bangalore