ಹಾಸನ,ನವೆಂಬರ್,3,2026 (www.justkannada.in): ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲು ವಿಳಂಬ ಧೋರಣೆ ತಾಳುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ತೀವ್ರ ಬೇಸರ ಹೊರ ಹಾಕಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಧ್ವನಿ ಎತ್ತಿದ್ದೇನೆ. ಇದು ನನ್ನ ವಿಚಾರ ಅಲ್ಲ. ಮಹಿಳೆಯರ ವಿಚಾರ ಮಹಿಳಾ ರಾಜಕೀಯ ಹಿತದೃಷ್ಠಿಯಿಂದ ಮಾತನಾಡುವ ವಿಚಾರ. ಸರ್ಕಾರ, ಪಕ್ಷದ ವಿರುದ್ದ ಮಾತನಾಡುವ ವಿಚಾರ ಅಲ್ಲ ಇದು. ಮಹಿಳೆಯರ ಹಿತಾಸಕ್ತಿಯಿಂದ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಅನುಕೂಲ ಮಾಡಿದೆ. ಎಲ್ಲೋ ಒಂದು ಕಡೆ ದಿಕ್ಕು ತಪ್ಪುತ್ತಿರುವುದು ಬೇಸರ ತಂದಿದೆ. ಆದಷ್ಟು ಬೇಗ ಸರಿಪಡಿಸುತ್ತಾರೆ ಅಂದುಕೊಂಡಿದ್ದೇನೆ. ಆಡಳಿತ ಪಕ್ಷವಾಗಿ ಮಾತನಾಡುವುದು ಸರಿಯಿಲ್ಲ. ಮಾತನಾಡಿದರೇ ಇರುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ನಾನು ಮಹಿಳಾ ಶಾಸಕಿಯಾಗಿ ಧ್ವನಿ ಎತ್ತಬೇಕು. ಧ್ವನಿ ಎತ್ತಲಿಲ್ಲ ಎಂದರೇ ನನಗೆ ನಾಚಿಕೆಗೇಡಿನ ಪರಿಸ್ಥಿತಿ ಆಗುತ್ತೆ. ಅದಕ್ಕೆ ನಾನು ಮಹಿಳೇಯರ ಪರ ಧ್ವನಿ ಎತ್ತುತ್ತಿದ್ದೇನೆ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದರು.






