ಚಿತ್ರದುರ್ಗ,ನವೆಂಬರ್,3,2026 (www.justkannada.in): ಹೆಚ್ ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಭಿವೃದ್ದಿ ಆಗಿದೆಯಾ? ನಾವು ಬೆಂಬಲ ಕೊಟ್ಟು ಸಾಲಮನ್ನಾ ಮಾಡಿಸಿದೆವು ಎಂದು ಸಿಎಂ ಡಿಕೆ ಶಿವಕುಮಾರ್ ನುಡಿದರು.
ಹಿರಿಯೂರು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಿದ್ದತೆ ನಡೆಸುತ್ತಿದ್ದು ಇಂದು ಚಿತ್ರದುರ್ಗ ಜಿಲ್ಲೆಯ ಧರ್ಮಾಪುರಕ್ಕೆ ಭೇಟಿ ನೀಡಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಧರ್ಮಾಪುರ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದು ನಾವು. ನಮ್ಮ ಸರ್ಕಾರದಲ್ಲಿ ಹಣದ ಕೊರತೆ ಏನೂ ಇಲ್ಲ. ಕನಕಪುರದಷ್ಟೇ ಹಿರಿಯೂರು ಕ್ಷೇತ್ರ ನನಗೆ ಮುಖ್ಯ ಎಂದರು.
ಬಿಜೆಪಿ ಜೆಡಿಎಸ್ ಸೇರಿ ಒಂದೇ ಅಭ್ಯರ್ಥಿ ಮಾಡಿಕೊಳ್ಳುತ್ತಾರೆ. ಬಿಎಸ್ ವೈ ಹೆಚ್ ಡಿಕೆ ಕಾಲದಲ್ಲಿ ಅಭಿವೃದ್ಧಿ ಆಗಿದೆಯಾ ನಾವು ಬೆಂಬಲ ಕೊಟ್ಟು ಸಾಲಮನ್ನಾ ಮಾಡಿಸಿದೆವು. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5300 ಕೋಟಿ ರೂ ಘೋಷಿಸಿತು. ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ.. ಖಾಲಿ ಡಬ್ಬ ಎಂದು ಕುಮಾರಸ್ವಾಮಿ ಅವರನ್ನ ನೀವು ಕೇಳಬೇಕು . ನಾನು ಸಿಎಂ ಆಗಿದ್ದಾಗ ಈ ಹೋಬಳಿಯಲ್ಲಿ ಹೆಚ್ಚು ಮತ ನೀಡಿ ಯಾರು ಬೇಕಾದರೂ ಬರಲಿ ನಾನು ನಿಮ್ಮ ಸೇವೆಗೆ ಇದ್ದೇನೆ. ಪಕ್ಷ ಒಂದು ಕಡೆ ಬಿಡಿ ಆ ಪಕ್ಷದಿಂದ ಈಗ ಏನೂ ಆಗುವುದಿಲ್ಲ. ಅಧಿಕಾರಿದ್ದಾಗ ಏನೂ ಮಾಡಲು ಆಗಲಿಲ್ಲ ಎಂದು ಜೆಡಿಎಸ್ ಹೆಸರು ಹೇಳದೇ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.






