Tuesday, November 3, 2026

Dasara Wishes

Happy Dasara
Home Front Page ವಾಹನ ಸವಾರರ ಜೀವದ ಜೊತೆ ಚೆಲ್ಲಾಟ: ಅರಮನೆ ಸುತ್ತ ಫೋಟೋಶೂಟ್‌ ಗೆ ಕಡಿವಾಣ ಹಾಕಿ-ಸಾಮಾಜಿಕ ಕಾರ್ಯಕರ್ತ...

ವಾಹನ ಸವಾರರ ಜೀವದ ಜೊತೆ ಚೆಲ್ಲಾಟ: ಅರಮನೆ ಸುತ್ತ ಫೋಟೋಶೂಟ್‌ ಗೆ ಕಡಿವಾಣ ಹಾಕಿ-ಸಾಮಾಜಿಕ ಕಾರ್ಯಕರ್ತ ಆಗ್ರಹ

ವಾಹನ ಸವಾರರ ಜೀವದ ಜೊತೆ ಚೆಲ್ಲಾಟ: ಅರಮನೆ ಸುತ್ತ ಫೋಟೋಶೂಟ್‌ ಗೆ ಕಡಿವಾಣ ಹಾಕಿ-ಸಾಮಾಜಿಕ ಕಾರ್ಯಕರ್ತ ಆಗ್ರಹ

​ಮೈಸೂರು,ನವೆಂಬರ್,3,2026 (www.justkannada.in): ಮೈಸೂರು ಅರಮನೆಯ ಸುತ್ತಮುತ್ತ ಫೋಟೋ ಶೂಟ್ ಹಾಗೂ ಸೆಲ್ಫಿ ಹೆಸರಿನಲ್ಲಿ ರಸ್ತೆಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆಗೆ ತಕ್ಷಣವೇ ಕಡಿವಾಣ ಹಾಕಬೇಕು. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಾರ್ವಜನಿಕರ ಸಂಚಾರ ಸುರಕ್ಷತೆಗೂ ಧಕ್ಕೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.

​ಅರಮನೆಯ ಸುತ್ತಲಿನ ಸಾರ್ವಜನಿಕ ರಸ್ತೆಗಳು ಫೋಟೋಶೂಟ್ ತಾಣಗಳಾಗಿ ಮಾರ್ಪಡುತ್ತಿರುವುದರಿಂದ ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದೆ. ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡುವ ಇಂತಹ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.ವಾಹನ ಸವಾರರ ಜೀವದ ಜೊತೆ ಚೆಲ್ಲಾಟ: ಅರಮನೆ ಸುತ್ತ ಫೋಟೋಶೂಟ್‌ ಗೆ ಕಡಿವಾಣ ಹಾಕಿ-ಸಾಮಾಜಿಕ ಕಾರ್ಯಕರ್ತ ಆಗ್ರಹ

​ಇಂದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಯಾರು ಹೊಣೆಗಾರರು? ಸಾರ್ವಜನಿಕರ ಜೀವಕ್ಕೆ ಯಾವುದೇ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿರುವ ಅವರು, ಅರಮನೆಯ ಸುತ್ತಮುತ್ತ ಅನಧಿಕೃತ ಫೋಟೋಶೂಟ್‌ ಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.Restrict jk02_new jk02 new

Restrict, photoshoots, around, Mysore, palace, demands,  social activist

English Summary
Title

Restrict photo shoots around the palace – Social activist demands

Short Description
Social activist Vikram Iyengar has urged for an immediate curb on the chaos occurring on the roads around the Mysore Palace, driven by people conducting photo shoots and taking selfies. He stated that this is causing significant inconvenience to motorists and compromising public road safety. With public roads surrounding the palace effectively turning into photo-shoot locations, motorists are facing daily struggles. Vikram Iyengar has demanded that the police department and relevant authorities take strict action to put an end to such activities that obstruct traffic on the roads.
Keywords
Restrict, photoshoots, around, Mysore, palace, demands, social activist