ಬೆಂಗಳೂರು,ನವೆಂಬರ್,3,2026 (www.justkannada.in): ರಾಜ್ಯದಲ್ಲಿ ಬಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಪ್ರಕರಣದಲ್ಲಿ ಕಳೆದ ಎರಡು ದಿನಗಳಿಂದ ಹೊಸ ತಿರುವು ಸಿಕ್ಕಿದ್ದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೆಸರು ತಳುಕು ಹಾಕಿಕೊಂಡಿದೆ. ಈ ಸಂಬಂಧ ನಿನ್ನೆ ಸುದ್ದಿಗೋಷ್ಠಿ ನಡೆಸಿ ಹೆಚ್ ಡಿ ಕುಮಾರಸ್ವಾಮಿ ತನಿಖೆಗೆ ಎಲ್ಲಾ ರೀತಿಯ ಸಿದ್ದ ಸೂಕ್ತ ಪಾರದರ್ಶಕ ತನಿಖೆಯಾಗಲಿ ಎಂದು ತೊಡೆ ತಟ್ಟಿದ್ದರು. ಇದೀಗ ಈ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಮಾಜಿ ಸಚಿವ, ಶಾಸಕ ಕೆ,ಎನ್ ರಾಜಣ್ಣ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಕೆ.ಎನ್ ರಾಜಣ್ಣ, ಸ್ಟಿಂಗ್ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕಿದೆ. ಸ್ಟಿಗ್ ಪ್ರಕರಣದಲ್ಲಿ ಸತ್ಯ ಹೊರಗೆ ಬರಬೇಕು ಸೂಕ್ತ ತನಿಖೆ ಆಗಿ ಸತ್ಯ ಹೊರಬರಬೇಕು ಎಂದರು.
ರಾಹುಲ್ ಗಾಂಧಿ ಅವರನ್ನ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಸ್ಟಿಂಗ್ ನಿಂದ ಪಕ್ಷಕ್ಕೆ ಆಗುತ್ತಿರುವ ಪರಿಣಾಮದ ಬಗ್ಗೆ ತಿಳಿಸಿದ್ದಾರೆ. ತನಿಖೆ ಉನ್ನತ ಮಟ್ಟದ್ದಾಗಲಿ, ಕೆಳಮಟ್ಟದ್ದಾಗಲಿ ಸತ್ಯ ಹೊರ ಬರಲಿ ಸೂಕ್ತ ತನಿಖೆ ಆಗಿ ಸತ್ಯ ಹೊರಬರಬೇಕು. ಮುಂದೆ ಸ್ಟಿಂಗ್ ವಿಷಯದಲ್ಲಿ ಕರ್ನಾಟಕ ಮಾಡೆಲ್ ಅಂತಾಗುತ್ತೆ ಕರ್ನಾಟಕ ಮಾಡೆಲ್ ಎಂಬ ಅಪಕೀರ್ತಿಗೆ ಕಾರಣವಾಗುತ್ತದೆ ಇಂತಹ ಕೃತ್ಯಗಳನ್ನ ಯಾರೂ ಮಾಡಬಾರದು ಎಂದರು.







