Tuesday, November 3, 2026

Dasara Wishes

Happy Dasara
Home Front Page ಹಾಲು ಮೊಸರಿನ ಬೆಲೆ ದುಬಾರಿ: ಮಂಡ್ಯದಲ್ಲಿ ಬಿಜೆಪಿ ವಿಭಿನ್ನ ಪ್ರತಿಭಟನೆ

ಹಾಲು ಮೊಸರಿನ ಬೆಲೆ ದುಬಾರಿ: ಮಂಡ್ಯದಲ್ಲಿ ಬಿಜೆಪಿ ವಿಭಿನ್ನ ಪ್ರತಿಭಟನೆ

ಹಾಲು ಮೊಸರಿನ ಬೆಲೆ ದುಬಾರಿ: ಮಂಡ್ಯದಲ್ಲಿ ಬಿಜೆಪಿ ವಿಭಿನ್ನ ಪ್ರತಿಭಟನೆ

ಮಂಡ್ಯ,ನವೆಂಬರ್,3,2026 (www.justkannada.in): ರಾಜ್ಯದಲ್ಲಿ ಹಾಲು-ಮೊಸರಿನ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನ ಖಂಡಿಸಿ ಮಂಡ್ಯದಲ್ಲಿ ಬಿಜೆಪಿ ವಿಭಿನ್ನ ಪ್ರತಿಭಟನೆ ನಡೆಸಿತು.

ಹಾಲಿನ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದ ಮಹಾವೀರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡ ಸಿಟಿ ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಗುಲಾಬಿ ಕೊಟ್ಟು ಹಾಲು- ಮೊಸರು ವಿತರಿಸಿ ವಿಭಿನ್ನ ರೀತಿ ಪ್ರತಿಭಟಿಸಿದರು.

ಬೆಲೆ ಏರಿಕೆ ಬಾದ್ ಷಾ , ಬೆಲೆ ಏರಿಕೆ ದೊರೆ ಎಂದು ಸಿಎಂ ಡಿಕೆಶಿ ಪೋಸ್ಟರ್ ಹಿಡಿದು ವ್ಯಂಗ್ಯವಾಡಿದ ಪ್ರತಿಭಟನಾಕಾರರು  ಇದು ಪಿಕ್ ಪ್ಯಾಕೆಟ್ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಹಾಲು ಮೊಸರಿನ ಬೆಲೆ ದುಬಾರಿ: ಮಂಡ್ಯದಲ್ಲಿ ಬಿಜೆಪಿ ವಿಭಿನ್ನ ಪ್ರತಿಭಟನೆ

ರಾಜ್ಯದಲ್ಲಿ ಹಾಲಿನ ದರ 8 ರೂ ಏರಿಕೆ ಮಾಡಿ ಕಾಂಗ್ರೆಸ್‌ ಸರ್ಕಾರ ಜನ ವಿರೋಧಿ ಧೋರಣೆ ತೋರುತ್ತಿದೆ. ಸರ್ಕಾರದ ಖಜಾನೆಯಿಂದ  ರೈತರಿಗೆ ನೆರವು ನೀಡದೆ ಇದರ ಬದಲು ಹಾಲಿನ ದರ ಹೆಚ್ಚಿಸಿ ರೈತರಿಗೆ ನೆರವು ನೀಡುವ ನಾಟಕವಾಡಲಾಗುತ್ತಿದೆ. ಈ ಹಿಂದೆ ಹಾಲಿನ ದರ ಹೆಚ್ಚಿಸಿದಾಗ ಅದರ ಲಾಭ ರೈತರಿಗೆ ಸಿಕ್ಕಿಲ್ಲ. ಇದು ಕಾಂಗ್ರೆಸ್‌ ದುರಾಡಳಿತದ ನಡೆಯಾಗಿದೆ. ಜನರ ಜೇಬಿಗೆ ಕತ್ತರಿ ಹಾಕಿ ಪಿಕ್ ಪ್ಯಾಕೆಟ್ ಮಾಡುತ್ತಿದೆ. ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಬುದ್ದಿಕಲಿಸುತ್ತಾರೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.High prices jk02_new jk02 new

 

English Summary
Title

BJP Protests Milk & Curd Price Hike in Mandya, Karnataka

Short Description
BJP workers staged a unique protest at Mahaveer Circle in Mandya against the Congress-led Karnataka government over rising milk and curd prices. Led by CT Manjunath, protestors distributed free milk, curd, and roses to the public. Protesters slammed the administration as a "Pickpocket Government," using placards to mock leaders as "Price Hike Kings." They claimed the hike burdens citizens without benefiting local dairy farmers. This demonstration follows the state's decision to increase milk prices by up to ₹8/litre and curd by up to ₹14/kg, which officials defended by citing severe drought and rising production expenses for small farmers.
Keywords
High prices, milk, curd, BJP, protest, Mandya