Saturday, August 22, 2026

BDA Apartments

Home Cinema ಅಕ್ಟೋಬರ್ 15ರಂದು ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಮರು ಬಿಡುಗಡೆ

ಅಕ್ಟೋಬರ್ 15ರಂದು ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಮರು ಬಿಡುಗಡೆ

ಬೆಂಗಳೂರು,ಅಕ್ಟೋಬರ್,10,2020(www.justkannada.in) : ನರೇಂದ್ರ ಮೋದಿ ಬಯೋಪಿಕ್  ‘ಪಿಎಂ ನರೇಂದ್ರ ಮೋದಿ’ ಅಕ್ಟೋಬರ್ 15ರಂದು ಮರು ಬಿಡುಗಡೆಯಾಗುತ್ತಿದೆ.jk-logo-justkannada-logoಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ತೆರೆಯುತ್ತಿದ್ದು, ಕೊರೊನಾ ಲಾಕ್ ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಾಗಿದೆ.

ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಿರುವ ಚಿತ್ರವಾಗಿದ್ದು, ಸಿನಿಮಾ ವಿಮರ್ಶಕ ತರಣ್ ಆದರ್ಶ್ ಈ ವಿಚಾರವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಗೆಟಪ್ ನಲ್ಲಿ ಇರುವ ವಿವೇಕ್ ಒಬೆರಾಯ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ವಿವೇಕ್ ಒಬೆರಾಯ್, ಆರತಿ ತಟ್ಟೆಯನ್ನು ಹಿಡಿದಿದ್ದಾರೆ. ಚಿತ್ರದಲ್ಲಿ ಬೊಮನ್ ಇರಾನಿ, ಮನೋಜ್ ಜೋಷಿ, ಪ್ರಶಾಂತ್ ನಾರಾಯಣ್, ಬರ್ಖಾ ದತ್, ರಾಜೇಂದ್ರ ಗುಪ್ತಾ ಹಾಗೂ ಝರೀನಾ ವಹಾಬ್ ನಟಿಸಿದ್ದಾರೆ.

PM Narendra Modi-Re-Release-Cinema-October 15

ಲೋಕಸಭೆ ಚುನಾವಣೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿರಲಿಲ್ಲ

ಕಳೆದ ವರ್ಷ ಮೇ.24ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಆ ಸಮಯದಲ್ಲಿ ಲೋಕಸಭೆ ಚುನಾವಣೆ ಇದ್ದಿದ್ದರಿಂದ ಈ ಸಿನಿಮಾಗೆ ಅಷ್ಟೇನೋ ಪ್ರತಿಕ್ರಿಯೆ ದೊರೆಯಲಿಲ್ಲ. ಮತ್ತೆ ಬಿಡುಗಡೆ ಮಾಡಬೇಕು ಎನ್ನುವಷ್ಟರಲ್ಲಿ ಕೊರೊನಾ ಸಮಸ್ಯೆ ಎದುರಾಗಿದೆ. ಆದ್ದರಿಂದ ಈ ಚಿತ್ರವನ್ನು ಈಗ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಜರ್ನಿ

ಒಮಂಗ್ ಕುಮಾರ್ ನಿರ್ದೇಶನದ ಚಿತ್ರವನ್ನು ಸಂದೀಪ್ ಸಿಂಗ್, ಆನಂದ್ ಪಂಡಿತ್, ಸುರೇಶ್ ಒಬೆರಾಯ್ ಮೂವರು ಸೇರಿ ನಿರ್ಮಿಸುತ್ತಿದ್ದಾರೆ. ಪಿಎಂ ಮೋದಿ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಜರ್ನಿ ಬಗ್ಗೆ ತೋರಿಸಲಾಗಿದೆ.

key words : PM Narendra Modi-Re-Release-Cinema-October 15