ಕೆಬಿಸಿ ಹಾಟ್ ಸೀಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಒಲಂಪಿಕ್ ಚಾಂಪಿಯನ್ಸ್.

ಮುಂಬೈ,ಸೆಪ್ಟಂಬರ್,13,2021(www.justkannada.in): ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಪುರುಷರ ಹಾಕಿ ತಂಡದ ಪಿ.ಆರ್‌. ಶ್ರೀಜೇಶ್ ಅವರು ಜನಪ್ರಿಯ ರಿಯಾಲಿಟಿ ಶೋ ‌ʼಕೌನ್ ಬನೇಗಾ ಕ್ರೋರ್‌ಪತಿʼ (ಕೆಬಿಸಿ) ಹಾಟ್‌ಸೀಟ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಎಸೆತದಲ್ಲಿ ಬಂಗಾರದ ಸಾಧನೆಗೈದ ನೀರಜ್ ಚೋಪ್ರಾ, ಜಾಗತಿಕ ಕ್ರೀಡಾಕೂಟದ ಟ್ರಾಕ್ ಮತ್ತು ಫೀಲ್ಡ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಆರಂಭಿಕ ವೀರೇಂದ್ರ ಸೆಹ್ವಾಗ್ ಕೆಬಿಸಿ ಶೋ ಒಂದರಲ್ಲಿ ಕಾಣಿಸಿಕೊಂಡ ಬಳಿಕ ಈ ವಿನೂತನ ಸಂಚಿಕೆ ಮೂಡಿ ಬರುತ್ತಿದೆ. ಈ ಶೋನ ಟೀಸರ್‌ಅನ್ನು ಸೋನಿ ಟಿವಿ ಇನ್‌ಸ್ಟಾಗ್ರಾಂನಲ್ಲಿರುವ ತನ್ನ ಪೇಜ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ಈ ವಿಶೇಷ ಸಂಚಿಕೆ ಶುಕ್ರವಾರ ಬಿತ್ತರವಾಗಲಿದೆ.