‘ಸಖತ್​’ ಚಮಕ್ ಕೊಡಲು ಥಿಯೇಟರ್’ಗೆ ಗೋಲ್ಡನ್ ಸ್ಟಾ್ ಗಣೇಶ್

ಬೆಂಗಳೂರು, ನವೆಂಬರ್ 26, 2021 (www.justkannada.in): ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಚಿತ್ರರಂಗ ಈಗ ಮತ್ತೆ ಹಳೇ ಚಾರ್ಮ್​ ಪಡೆದುಕೊಂಡಿದೆ. ಪ್ರತಿ ವಾರ ಒಂದಾದ ಮೇಲೊಂದರಂತೆ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಇನ್ನು ಈ ವಾರ ಇಂದು ಕನ್ನಡದಲ್ಲಿ ‘ಗೋಲ್ಡನ್​ ಸ್ಟಾರ್​’ ಗಣೇಶ್​ ನಟನೆಯ ‘ಸಖತ್​’ ಸಿನಿಮಾ ಬಿಡುಗಡೆ ಆಗುತ್ತಿದೆ.

ನಿರ್ದೇಶಕ ಸಿಂಪಲ್​ ಸುನಿ ಮತ್ತು ‘ಗೋಲ್ಡನ್​ ಸ್ಟಾರ್’ ಗಣೇಶ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಸಖತ್​’ ಸಿನಿಮಾದಲ್ಲಿ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಸುರಭಿ ಪುರಾಣಿಕ್​ ನಟಿಸಿದ್ದಾರೆ.

ಅಂಧನ ಪಾತ್ರದಲ್ಲಿ ಗಣೇಶ್​ ಕಾಣಿಸಿಕೊಂಡಿದ್ದಾರೆ. ‘ಚಮಕ್​’ ಬಳಿಕ ಎರಡನೇ ಬಾರಿಗೆ ಗಣೇಶ್​ ಮತ್ತು ಸುನಿ ಜತೆಯಾಗಿ ಕೆಲಸ ಮಾಡಿದ್ದಾರೆ.

ಇದರ ಜತೆಗೆ ಹಿಂದಿಯ ‘ಅಂತಿಮ್​: ದಿ ಫೈನಲ್​ ಟ್ರುತ್​’ ಹಾಗೂ ‘ಸತ್ಯಮೇವ ಜಯತೆ 2’ ಸಿನಿಮಾಗಳು ಈ ವಾರ ತೆರೆಕಂಡಿವೆ. ಗಲ್ಲಾಪೆಟ್ಟಿಗೆಯಲ್ಲಿ ಸ್ಟಾರ್​ ನಟರ ಚಿತ್ರಗಳು ರಿಲೀಸ್ ಆಗುತ್ತಿವೆ.