ತನಿಖಾಧಿಕಾರಿ ಮುಂದೆ ಕಣ್ಣೀರು ಸುರಿಸಿದ್ರಾ ಹಂಸಲೇಖ…?!

ಬೆಂಗಳೂರು, ನವೆಂಬರ್ 26, 2021 (www.justkannada.in): ಹಂಸಲೇಖ ಅವರು ಬಸವನಗುಡಿ ಠಾಣೆ ಪೋಲಿಸರ ಮುಂದೆ ಗುರುವಾರ ವಿಚಾರಣೆಗೆ ಹಾಜರಾಗಿದ್ದರು. ಆ ವೇಳೆ ವಿಚಾರಾಣಾಧಿಕಾರಿ ಮುಂದೆ ಕಣ್ಣೀರು ಸುರಿಸಿದ್ದಾರೆ ಎನ್ನಲಾಗಿದೆ.

ಆ ಕಾರ್ಯಕ್ರಮದಲ್ಲಿ ನಾನು ಏಕೆ ಹಾಗೆ ಹೇಳಿದೆನೋ ಗೊತ್ತಿಲ್ಲ ,ನನಗೆ ಅಂತಹ ಯಾವುದೇ ಉದ್ದೇಶವೂ ಇರಲಿಲ್ಲ , ಮಾತಿನ ಬರದಲ್ಲಿ ಹಾಗೆ ಹೇಳಿದೆ ಎಂದು ಹಂಸಲೇಖ ಹೇಳಿದ್ದಾರೆ ಎನ್ನಲಾಗಿದೆ.

ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ದಾರೆ .ಯಾವುದೇ ಜಾತಿಯನ್ನು ನಿಂದಿಸುವ ಉದ್ದೇಶ ನನ್ನದಲ್ಲ , ನಾನು ತುಂಬಾ ನೋವು ಅನುಭವಿಸುತ್ತದ್ದೇನೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಜಾತಿಯನ್ನು ನಿಂದಿಸುವ ಉದ್ದೇಶ ನನ್ನದಲ್ಲ , ನಾನು ತುಂಬಾ ನೋವು ಅನುಭವಿಸುತ್ತದ್ದೇನೆ ಎಂದು ಹಂಸಲೇಖ ಹೇಳಿದ್ದಾರೆ ಎನ್ನಲಾಗಿದೆ.