ಅಪ್ಪು ಫೋಟೋ ಹಿಡಿದು ಶಬರಿಮಲೆ ಅಯ್ಯಪ್ಪನ ದರ್ಶನಕ್ಕಾಗಿ 18 ಮೆಟ್ಟಿಲು ಏರಿದ ಅಭಿಮಾನಿ!

ಬೆಂಗಳೂರು, ನವೆಂಬರ್ 26, 2021 (www.justkannada.in): ಅಪ್ಪು ಅಭಿಮಾನಿಗಳ ಅಭಿಮಾನ ದಿನದಿಂದ ದಿನಕ್ಕ ಹೆಚ್ಚುತ್ತಲೇ ಇದೆ. ನಾನಾ ಮಾರ್ಗಗಳ ಮೂಲಕ ಅಪ್ಪು ಅಭಿಮಾನಿಗಳು ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.

ಇನ್ನು ಇದಕ್ಕೆ ಉದಾಹರಣೆ ಎಂಬಂತೆ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರೂ ಆಗಿರುವ ವ್ಯಕ್ತಿಯೊಬ್ಬರು, ಸನ್ನಿಧಾನದ ಮೆಟ್ಟಿಲು ಏರುವ ಸಂದರ್ಭದಲ್ಲಿ ಅಪ್ಪು ಫೋಟೊ ಹಿಡಿದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರು ಟ್ವಿಟರ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಶಬರಿಮಲೆ ದರ್ಶನ ಆರಂಭವಾಗಿದ್ದು, ರಾಜ್ಯದಿಂದ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದಾರೆ.

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅಪ್ಪುವಿನ ಫೋಟೊವನ್ನು ತೆಗೆದುಕೊಂಡು ಹೋಗುವ ಮೂಲಕ ಅಭಿಮಾನಿಯೊಬ್ಬರು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.