ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತರಾಜ್ಯ ಕಳ್ಳರು ಅಂದರ್…

ಮೈಸೂರು,ಜನವರಿ,9,2021(www.justkannada.in):  ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದ  ನಾಲ್ವರು ಅಂತರಾಜ್ಯ ಕಳ್ಳರನ್ನ ನೈಜರ್ ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.jk-logo-justkannada-mysore

ಭೂಪತಿ, ಪ್ರಾನ್ಸಿಸ್, ಸೆಂದಿಲ್ ಕುಮಾರ್, ಪ್ರವೀಣ್ ಕುಮಾರ್ ಬಂಧಿತ ಆರೋಪಿಗಳು ಬಂಧಿತರು. ರ್ಕಾರಿ ಕಚೇರಿ ಆವರಣದಲ್ಲೇ ಗಂಧದ ಮರ ಕದಿಯುತ್ತಿದ್ದರು ಎನ್ನಲಾಗಿದೆ.  ತಮಿಳುನಾಡಿನ ಈರೋಡ್ ಮೂಲದ ಆರೋಪಿಗಳಾಗಿದ್ದು ಈ ಕುರಿತು ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ. ನಾಲ್ವರು ಆರೋಪಿಗಳು ಒಟ್ಟು 10ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದು, ಆರೋಪಿಗಳಿಂದ 5ಲಕ್ಷ ಮೌಲ್ಯದ 46 ಕೆ.ಜಿ ಶ್ರೀಗಂಧ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ. four- interstate- thieves - stealing –sandalwood-arrest-mysore

ಪ್ರಮುಖ ಆರೋಪಿ ರಾಹಿಲ್ ನಾಪತ್ತೆ‌ಯಾಗಿದ್ದಾನೆ. ಹಗಲು ಹೊತ್ತಿನಲ್ಲಿ ಮರಗಳ ಗುರುತು ಮಾಡಿ ರಾತ್ರಿ ವೇಳೆ  ಆರೋಪಿಗಳು ಕಳ್ಳತನ ಮಾಡುತ್ತುದ್ದರು ಮೈಸೂರಿನಲ್ಲಿ ಕಳ್ಳತನ ಮಾಡಿ ತಮಿಳುನಾಡಿನಲ್ಲಿ  ಶ್ರೀಗಂಧ ಮರವನ್ನು ಮಾರಾಟ ಮಾಡುತ್ತಿದ್ದರು. ಈ ನಡುವೆ ನಜರ್ ಬಾದ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುವಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ಧಿದ್ದಾರೆ.

Key words: four- interstate- thieves – stealing –sandalwood-arrest-mysore