ಕನ್ನಡ ಶಾಲೆಯ ಸಮಾಧಿಯ ಮೇಲೆ ಸ್ಮಾರಕ ನಿರ್ಮಾಣ ಬೇಡ: ಸಿಎಂಗೆ ಸಹಿ ಚಳುವಳಿ ಮೂಲಕ ಆಗ್ರಹ.

ಮೈಸೂರು,ಜುಲೈ,13,2021(www.justkannada.in): ಸ್ಮಾರಕದ ಹೆಸರಿನಲ್ಲಿ 140 ವರ್ಷ ಇತಿಹಾಸವುಳ್ಳ ಕನ್ನಡದ ಶಾಲೆಯನ್ನು ಬಲಿಪಶು ಮಾಡುವುದು ಎಷ್ಟು ಸಮಂಜಸ.  ಕನ್ನಡ ಶಾಲೆಯ ಸಮಾಧಿಯ ಮೇಲೆ ಸ್ಮಾರಕ ನಿರ್ಮಾಣ ಬೇಡ ಎಂದು ಮೈಸೂರು ಕನ್ನಡ ವೇದಿಕೆ  ವತಿಯಿಂದ ಮುಖ್ಯಮಂತ್ರಿಗಳಿಗೆ ಸಹಿ ಚಳುವಳಿ ಮೂಲಕ ಆಗ್ರಹಿಸಲಾಯಿತು.jk

ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್ .ಬಾಲಕೃಷ್ಣ ನೇತೃತ್ವದಲ್ಲಿ ಸಹಿ ಚಳುವಳಿ ನಡೆಯಿತು. ಈ ವೇಳೆ ಮಾತನಾಡಿದ ಎಸ್ .ಬಾಲಕೃಷ್ಣ ಅವರು, 140 ವರ್ಷ ಇತಿಹಾಸವಿರುವ ಕನ್ನಡ ಶಾಲೆಯನ್ನು ಮುಚ್ಚಿ ಅದರ ಸಮಾಧಿಯ ಮೇಲೆ ಸ್ಮಾರಕಕ್ಕೆ ಮುಂದಾಗಿರುವುದು ರಾಷ್ಟ್ರದ ಪ್ರತಿಷ್ಠೆ ಮಠಗಳಲ್ಲಿ ಒಂದಾದ ರಾಮಕೃಷ್ಣ ಮಠಕ್ಕೆ ಶೋಭೆ ತರುವಂತದಲ್ಲ. ಮೂಢನಂಬಿಕೆ ಕಂದಾಚಾರ, ದಾರಿದ್ಯ, ಬಡತನ ಇವೆಲ್ಲಕ್ಕೂ ಪರಿಹಾರ ಶಿಕ್ಷಣ ಎಂಬ ಭವಿಷ್ಯದ ಪರಿಕಲ್ಪನೆ  ಕಂಡಿದ್ದ ಶ್ರೇಷ್ಟ ಸಂತ ಸ್ವಾಮಿ ವಿವೇಕಾನಂದ ಅವರು ಯಾವ ದೇಶ ಶಿಕ್ಷಣದಲ್ಲಿ ಮುಂದೆ ಬರುತ್ತದೆಯೋ , ಆ ದೇಶ ಸಂಪದ್ಭರಿತವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.

ಶಿಕ್ಷಣ ಎಂಬ ಬುನಾದಿಯ ಮೇಲೆ ಆರೋಗ್ಯ ಸಮಾಜವನ್ನೇ ಕಟ್ಟಬಹುದೇ ವಿನಹ ಸ್ಮಾರಕದ ಮೇಲಲ್ಲ. ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಕ್ಷರ ದಾಸೋಹ, ಅನ್ನದಾಸೋಹ ,ಮೂಲಕ ಬಡವರ ಜಾತಿ,ಧರ್ಮಗಳ ಭೇದವಿಲ್ಲದೆ ಶಿಕ್ಷಣವನ್ನು ನೀಡುವ ಮೂಲಕ ಸಿದ್ದಗಂಗಾ ಶ್ರೀಗಳು ಇಡೀ ರಾಷ್ಟ್ರಕ್ಕೆ ಮಾದರಿಯಾದರು. ದುರಂತವೆಂದರೆ ರಾಮಕೃಷ್ಣ ಮಠಕ್ಕೆ ಏಕೆ ಬುದ್ಧಿ ಬರಲಿಲ್ಲ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಮಠವಾಗಲಿ, ಸ್ಮಾರಕ ಹಿತೃಸಿಗಳಾಗಲಿ, ಸ್ವಾಮಿ ವಿವೇಕಾನಂದ  ಪರಿಕಲ್ಪನೆಯಂತೆ ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ಮಾರಕವನ್ನು ಬದಿಗೊಟ್ಟು ಕನ್ನಡ ಶಾಲೆಗೆ ಪುನರುಜ್ಜೀವನ  ನೀಡುವ ಮೂಲಕ ಹೃದಯವಂತ ಕನ್ನಡಿಗರ  ಮನಸ್ಸನ್ನು ಗೆಲ್ಲಲಿ. ರಾಮಕೃಷ್ಣ ಆಶ್ರಮದವರು ಸಂಘರ್ಷವನ್ನು ಬಿಟ್ಟು ಸಾಮರಸ್ಯ ಮೂಲಕ ಕನ್ನಡ ಶಾಲೆಯನ್ನು ಉಳಿಸಲಿ ಎಂದು ಎಸ್ .ಬಾಲಕೃಷ್ಣ  ಹೇಳಿದರು.

ಸ್ವಾಮಿ ವಿವೇಕಾನಂದರ ಅನುಯಾಯಿಗಳಾದ ರಾಷ್ಟ್ರಕವಿ ಕುವೆಂಪು ಆಸೆಯಂತೆ ಕನ್ನಡ ಶಾಲೆ ನಿರ್ಮಾಣವಾಗಲಿ ಶಾಲೆಗೆ ಕಾರಣಕರ್ತರಾದ ರಾಜವಂಶಸ್ಥರಿಗೆ ಗೌರವಸಿಗಲಿ ಎಂದು ಮೈಸೂರು ಕನ್ನಡ ವೇದಿಕೆ ಅಗ್ರಹಿಸಿದೆ .

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಸಾಹಿತಿ ಬನ್ನೂರು ಕೆ.ರಾಜು, ಭೊಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗೋಪಿ, ಬೀಡಾ ಬಾಬು, ಸ್ವಮಿ ಗೈಡ್, ಅರವಿಂದ್,ಮದನ್, ಮಾಲಿನಿ, ಕಾವೇರಮ್ಮ, ರೇಖಾ, ಮಾದಪ್ಪ, ಗೀರಿಶ್, ಶ್ರೀನಿವಾಸ, ಮಹದೇವಸ್ವಾಮಿ, ಸಿದ್ದಪ್ಪಎಲ್ ಐಸಿ, ಗೋವಿಂದರಾಜು, ಕಪನಿಗೌಡ, ನಾಗರಾಜ್, ಶಿವಪ್ಪ, ಕಿರಣ್, ಬಸವರಾಜು, ಯೋಗಿ, ಮುಂತಾದವರು ಇದ್ದರು.

Key words: No monument – Kannada school –mysore- sahi movement – CM-mysuru kannada vedike