ಚುನಾವಣಾ ರಾಜಕೀಯ ನಿವೃತ್ತಿ ನನ್ನ ಸ್ವಂತ ನಿರ್ಧಾರ- ಮಾಜಿ ಸಿಎಂ ಸದಾನಂದಗೌಡ ಸ್ಪಷ್ಟನೆ.

ಬೆಂಗಳೂರು,ನವೆಂಬರ್,10,2023(www.justkannada.in): ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ನೀಡಲು   ಯಾರ ಒತ್ತಡ ಹಾಕಿಲ್ಲ.  ಇದು ನನ್ನ ಸ್ವಂತ ನಿರ್ಧಾರ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಸ್ಪಷ್ಟನೆ ನೀಡಿದರು.

ಈ ಕುರಿತು ಮಾತನಾಡಿದ ಡಿ.ವಿ ಸದಾನಂದಗೌಡ, ಚುನಾವಣಾ ರಾಜಕೀಯ ನಿವೃತ್ತಿಗೆ  ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಹನುಮನಂತೆ ಎದೆ ಬಗೆದು ತೋರಿಸಲು ಆಗಲ್ಲ. ನಾನು  ಸತ್ಯವನ್ನೇ  ಹೇಳಿದ್ದೇನೆ ರಾಜಕೀಯ ನಿವೃತ್ತಿ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ. ನಿವೃತ್ತಿ ಆಗುತ್ತೇನೆ  ಎಂದು 2019ರಲ್ಲಿ ಹೇಳಿದ್ದೆ.  ಆಗ ವರಿಷ್ಠರು ಈ ಬಾರಿ ಸ್ಪರ್ಧಿಸಿ ಎಂದಿದ್ದರು.  ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಪಕ್ಷದ ವಿರುದ್ದ ಯಾವುದೇ ಹೇಳಿಕೆ ನೀಡಿಲ್ಲ ನಾನು ಯಾರದ್ದೋ  ಚೇಲಾದಂತೆ ವರ್ತಿಸಿಲ್ಲ ಎಂದರು.

ನನಗೆ ಟಿಕೆಟ್ ನೀಡಲ್ಲ ಎಂಬುದು ಊಹಾಪೋಹ.  ನಾನು ಮತ್ತು ಬಿಎಸ್​  ಯಡಿಯೂರಪ್ಪ ಅವರು ಹೆಚ್ಚು ಅವಕಾಶ ಪಡೆದಿದ್ದೇವೆ. ಪಕ್ಷಕ್ಕೆ ನಮ್ಮ ಅನುಭವ ಧಾರೆ ಎರೆಯಲು ನಿಶ್ಚಯ ಮಾಡಿದ್ದೇವೆ. ಇಚ್ಛಾಶಕ್ತಿ ಇದ್ದರೆ ಯಾರು ಏನೂ ತೊಂದರೆ ಮಾಡಲು ಆಗಲ್ಲ. 2019ರಲ್ಲೇ ರಾಜಕೀಯ ನಿವೃತ್ತಿ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ. ಸಾಯುವವರೆಗೆ ನಾನೇ ಇರಬೇಕು ಎನ್ನುವಂತಾಗಬಾರದು. ಬಿಜೆಪಿಗೆ ಹಿರಿತನದ ಕೊರತೆ ಕಾಡುತ್ತದೆ ಎಂದು ಅನ್ನಿಸುವುದಿಲ್ಲ. ಎಂದು ಡಿ.ವಿ.ಸದಾನಂದಗೌಡ ತಿಳಿಸಿದರು.

Key words: Retiring – electoral politics – my –own-decision- Sadananda Gowda