Sunday, August 2, 2026

BDA Apartments

Home Front Page ಅತ್ಯುತ್ತಮ ಸೇವೆಗಾಗಿ ‘ಮುಖ್ಯಮಂತ್ರಿ ಚಿನ್ನದ ಪದಕ’ ಪಡೆದ ಅಗ್ನಿಶಾಮಕ ಚಾಲಕ.

ಅತ್ಯುತ್ತಮ ಸೇವೆಗಾಗಿ ‘ಮುಖ್ಯಮಂತ್ರಿ ಚಿನ್ನದ ಪದಕ’ ಪಡೆದ ಅಗ್ನಿಶಾಮಕ ಚಾಲಕ.

ಬೆಂಗಳೂರು,ಜುಲೈ,13,2021(www.justkannada.in): ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ “ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದಾಕ್ಕಾಗಿ ಅಗ್ನಿಶಾಮಕ ಚಾಲಕ ಎಸ್. ನವೀನ್ ಅವರಿಗೆ  ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿಯವರ ಚಿನ್ನದ ಪದಕ” ನೀಡಿ ಗೌರವಿಸಲಾಗಿದೆ.jk

ಎಸ್. ನವೀನ್  ಬೆಂಗಳೂರು ಹೆಬ್ಬಾಳ ನಿವಾಸಿಯಾಗಿದ್ದು  ಸುಮಾರು 14 ವರ್ಷಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಈ ಚಾಲಕ ವೃತ್ತಿಯ ಜೊತೆಯಲ್ಲಿ ಅಧಿಕಾರಿಗಳೊಂದಿಗೆ ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಅಗ್ನಿ ಅವಘಡ/ ತುರ್ತು ಸೇವೆಯ ಸಂದರ್ಭದಲ್ಲಿ ಸಹಾಯ ಮಾಡಲು ಸದಾ ಸಿದ್ದರಿರುತ್ತಾರೆ.

2019 ರಲ್ಲಿ ಧಾರವಾಡದಲ್ಲಿ ನಡೆದ ಕಟ್ಟಡ ಕುಸಿದು ಸಂಭವಿಸಿದ ಅವಘಡದ ಸಂದರ್ಭದಲ್ಲಿ ತಮ್ಮ ಹಂಗನ್ನು ತೊರೆದು ಹಲವಾರು ಜೀವಗಳನ್ನು ರಕ್ಷಿಸಿದ ಕೀರ್ತಿಯು ಇವರದ್ದಾಗಿದೆ. ಈ ರೀತಿ ತಮ್ಮ ಸೇವಾವಧಿಯಲ್ಲಿ, ಅನೇಕ ಅಗ್ನಿ ಅವಘಡ/ ತುರ್ತು ಸಂದರ್ಭ ಹಾಗು ಜೀವ ರಕ್ಷಣೆ ಕಾರ್ಯದಲ್ಲಿ ಸಲ್ಲಿಸಿರುವ ಅತ್ಯುನ್ನತ ಸೇವೆಯನ್ನು ಹಾಗೂ ಇವರ ಉತ್ತಮ ಕಾರ್ಯದ ನಿರ್ವಹಣೆಯನ್ನು ಪುರಸ್ಕರಸಿ ಕರ್ನಾಟಕ ರಾಜ್ಯ ಸರ್ಕಾರವು ಇಂದು ಮುಖ್ಯಮಂತ್ರಿಯವರಿಂದ “ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ” ವನ್ನು ನೀಡಿ ಗೌರವಿಸಿದೆ.

Key words: mukyamantri-Gold Medal- Fire Engine -Department -Driver