ಶಾಲಾ ಕಾಲೇಜು ಪ್ರಾರಂಭ, ಸ್ಪಷ್ಟ ತೀರ್ಮಾನ ಶೀಘ್ರದಲ್ಲಿ : ಸಚಿವ ಆರ್.ಅಶೋಕ್

ಬೆಂಗಳೂರು,ಡಿಸೆಂಬರ್,30,2020(www.justkannada.in) :  ಶಾಲಾ ಕಾಲೇಜು ಪ್ರಾರಂಭ ವಿಚಾರದ ಬಗ್ಗೆ ಗೊಂದಲ ಇರೋದು ನಿಜ. ಇದರ ಬಗ್ಗೆ ಸುರೇಶ್ ಕುಮಾರ್, ಸಿಎಂ ಚರ್ಚಿಸಿ, ಸ್ಪಷ್ಟ ತೀರ್ಮಾನವನ್ನ ಶೀಘ್ರದಲ್ಲೇ ಸಿಎಂ ಹೊರಡಿಸುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಶಾಲೆ ಪ್ರಾರಂಭಕ್ಕೆ ಕೆಲವರು ಒತ್ತಾಯಿಸಿದ್ದಾರೆ. ಹಲವರು ಶಾಲೆ ಪ್ರಾರಂಭ ಸದ್ಯಕ್ಕೆ ಬೇಡ ಅಂತಿದ್ದಾರೆ. ಹೀಗೆ,ಎರಡು ಅಭಿಪ್ರಾಯಗಳು ಕೇಳಿ ಬಂದಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಶುರುವಾಗ್ತಿದೆ. ಗೊಂದಲ ನಿವಾರಣೆಗೆ ನಾವು ಕ್ರಮತೆಗೆದುಕೊಳ್ತೇವೆ ಎಂದಿದ್ದಾರೆ.School,college,start,obvious,conclusion,soon,Minister,R.Ashokಬ್ರಿಟನ್ ವೈರಸ್ ಪ್ರಮಾಣ ನೋಡಿ ಗಮನಹರಿಸ್ತೇವೆ. ಸದ್ಯಕ್ಕೆ ಯಾವುದೇ ಲಾಕ್ ಡೌನ್ ಪ್ರಸ್ತಾಪವಿಲ್ಲ ಎಂದು ತಿಳಿಸಿದ್ದಾರೆ.

key words : School-college-start-obvious-conclusion-soon-
Minister-R.Ashok