ಯುವಜನರನ್ನ ಉತ್ತಮ ಭವಿಷ್ಯ ಹಾಗೂ ಜೀವನಕ್ಕೆ ಸಿದ್ಧಗೊಳಿಸುವುದು ಉನ್ನತ ಶಿಕ್ಷಣದ ಧ್ಯೇಯ- ಸಚಿವ ಅಶ್ವಥ್ ನಾರಾಯಣ್.

ಮೈಸೂರು,ಅಕ್ಟೋಬರ್,21,2022(www.justkannada.in): ಯುವಜನರನ್ನ ಉತ್ತಮ ಭವಿಷ್ಯ ಹಾಗೂ ಜೀವನಕ್ಕೆ ಸಿದ್ಧಗೊಳಿಸುವುದು ಉನ್ನತ ಶಿಕ್ಷಣದ ಧ್ಯೇಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ನುಡಿದರು.

ಮೈಸೂರಿನಲ್ಲಿ ಕೆಎಸ್‌ಹೆಚ್‌ಇಸಿ-ಇನ್ಫೋಸಿಸ್ ವತಿಯಿಂದ ‘ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಸುಧಾರಣೆಗಳು’ ಎಂಬ ವಿಷಯದ ಕುರಿತು ನಡೆದ ಕಾರ್ಯಗಾರದಲ್ಲಿ ಸಚಿವ ಅಶ್ವಥ್ ನಾರಾಯಣ್ ಮಾತನಾಡಿದರು.

ಶಿಕ್ಷಣ ಸಮುದಾಯವನ್ನು ಉದ್ಯೋಗಗಳಿಗೆ ಸಜ್ಜುಗೊಳಿಸುವುದು, ಪರಸ್ಪರ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಕಲಿಕೆಗೆ ಸುಗಮಗಾರಿಕೆಯನ್ನು ಕಲ್ಪಿಸುವ ಕುರಿತು ತರಬೇತುಗೊಳಿಸುವುದು ಈ ಕಾರ್ಯಗಾರದ ಉದ್ದೇಶವಾಗಿದೆ ಎಂದರು.

ಕೆಎಸ್‌ಹೆಚ್‌ಇಸಿ ಹಾಗೂ ಎಲ್ಲಾ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳು ಸೆಪ್ಟೆಂಬರ್  6, 2022ರಂದು ಇನ್ಪೋಸಿಸ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದವು ವಿದ್ಯಾರ್ಥಿಗಳನ್ನು ಭವಿಷ್ಯದ ವೃತ್ತಿ ಹಾಗೂ ಜೀವನಕ್ಕೆ ಸಿದ್ಧಗೊಳಿಸುವ ಧ್ಯೇಯದ ಕಡೆಗೆ ಕಾರ್ಯನಿರ್ವಹಿಸಲಿವೆ. ಈ ವೇದಿಕೆಯ ಮೂಲಕ ಇನ್ಫೋಸಿಸ್ ಸಂಸ್ಥೆಯು ತನ್ನ ಜ್ಞಾನ ಹಾಗೂ ಕಾರ್ಪೊರೇಟ್ ತರಬೇತಿಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದೆ. 12 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕೋರ್ಸ್ ಗಳೊಂದಿಗೆ ಇನ್ಫೋಸಿಸ್ 800ಕ್ಕೂ ಹೆಚ್ಚಿನ ಸಂಖ್ಯೆಯ ಶೈಕ್ಷಣಿಕ ತಜ್ಞರಿಗೆ ಬೆಂಬಲ ಒದಗಿಸಲಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಯುವಜನರನ್ನು ಅವರ ಉತ್ತಮ ಭವಿಷ್ಯ ಹಾಗೂ ಜೀವನಕ್ಕೆ ಸಿದ್ಧಗೊಳಿಸುವುದು ಉನ್ನತ ಶಿಕ್ಷಣದ ಉದ್ಧೇಶವಾಗಿದ್ದು, ಇಂತಹ ಕಾರ್ಯಗಾರಗಳು ಶೈಕ್ಷಣಿಕ ಪರಿಸರವ್ಯವಸ್ಥೆಯನ್ನು ಸುಧಾರಿಸಲು ನೆರವಾಗುತ್ತವೆ.  ರಾಜ್ಯದ ಪ್ರತಿಭೆಗಳ ಹುಟ್ಟಿಗೆ ಕೊಡುಗೆ ನೀಡುವಲ್ಲಿ ಇನ್ಫೋಸಿಸ್, ಕೆಎಸ್‌ ಹೆಚ್‌ ಇಸಿ ಹಾಗೂ ವಿಸಿಗಳು ಹಾಗೂ ತಂಡಗಳ ಉತ್ಸಾಹಭರಿತ ಭಾಗವಹಿಸುವಿಕೆಗೆ ಈ ಸಂದರ್ಭಧಲ್ಲಿ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದರು.

ಕಾರ್ಯಗಾರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Key words: mysore university-VC-G. Hemanth Kumar- Higher Education -Curriculum