Friday, August 14, 2026

BDA Apartments

Home Cinema ರಾಜಕೀಯದಿಂದ ಹಿಂದೆ ಸರಿದ ನಟ ಸೂಪರ್ ಸ್ಟಾರ್ ರಜನಿಕಾಂತ್….

ರಾಜಕೀಯದಿಂದ ಹಿಂದೆ ಸರಿದ ನಟ ಸೂಪರ್ ಸ್ಟಾರ್ ರಜನಿಕಾಂತ್….

ಚೆನ್ನೈ,ಡಿಸೆಂಬರ್,29,2020(www.justkannada.in):  ಡಿಸೆಂಬರ್ 31 ರಂದು ಹೊಸ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಇದೀಗ ತಮ್ಮ ನಿರ್ಧಾರವನ್ನ ಬದಲಿಸಿದ್ದು ರಾಜಕೀಯದಿಂದ ಹಿಂದೆ ಸರಿದಿದ್ದಾರೆ.

ಹೌದು ಆರೋಗ್ಯ ದೃಷ್ಠಿಯಿಂದ ಸದ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದು ನಟ ಸೂಪರ್ ಸ್ಟಾರ್ ರಜಿನಿಕಾಂತ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮೂರು ಪುಟಗಳ ವಿವರಣೆ ನೀಡಿ ಅದನ್ನು ಟ್ವೀಟ್​ಗೆ ಅಪ್ಲೋಡ್ ಮಾಡಿದ್ದಾರೆ. ಈ ವೇಳೆ ತಮಿಳುನಾಡು ಜನರ ಕ್ಷಮೆಯಾಚಿಸಿದ್ದಾರೆ.actor-superstar-rajinikanth-backs-off-politics

ಅನಾರೋಗ್ಯದ ಕಾರಣ ಮುಂದಿಟ್ಟುರುವ ಅವರು, ಸದ್ಯ ಚುನಾವಣಾ ಕಣಕ್ಕೆ ಇಳಿದು ಕೆಲಸಮಾಡಲಾರೆ. ಹೀಗಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಜಿನಿಕಾಂತ್ ಘೋಷಿಸಿದ್ದಾರೆ. ಸದ್ಯಕ್ಕೆ ರಾಜಕೀಯಕ್ಕೆ ಬರುವುದಕ್ಕೆ ಆಗುವುದಿಲ್ಲ.  ಆರೋಗ್ಯದ ದೃಷ್ಠಿಯಿಂದ ಪಕ್ಷ ಕಟ್ಟಲು ಆಗುವುದಿಲ್ಲ. ನಿಮ್ಮನ್ನ ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ ಎಂದು ನಟ ರಜಿನಿಕಾಂತ್ ತಿಳಿಸಿದ್ದಾರೆ.

Key words: actor- Superstar- Rajinikanth  – backs off -politics