ವಾಹನ ಚಾಲಕರಿಂದ ಹೆಚ್ಚು ಹಣ ವಸೂಲಿ ಆರೋಪ: ಆರ್ ಟಿಓ ಚೆಕ್ ಪೋಸ್ಟ್  ಮೇಲೆ ಲೋಕಾಯುಕ್ತ ದಾಳಿ.

ಚಿಕ್ಕಬಳ್ಳಾಪುರ,ಅಕ್ಟೋಬರ್,22,2022(www.justkannada.in): ವಾಹನ ಚಾಲಕರಿಂದ ಹೆಚ್ಚು ಹಣ ವಸೂಲಿ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಆರ್ ಟಿಓ ಚೆಕ್ ಪೋಸ್ಟ್  ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

ಬೆಂಗಳೂರು- ಹೈದರಾಬಾದ್ ರಾ-ಹೆದ್ಧಾರಿ 44 ರ ಚೆಕ್ ಪೋಸ್ಟ್  ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಆರ್ ಟಿ ಓ ಇನ್ಸ್ ಪೆಕ್ಟರ್ ಮಹದೇವಪ್ಪ, ಸಿಬ್ಬಂದಿಯನ್ನ ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಹಣ ಪತ್ತೆಯಾದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ.

Key words:  Lokayukta- attack – RTO- check post-chikkaballapur