ನಕಲಿ ಜಾತಿ ಪ್ರಮಾಣ ಪತ್ರ ವಿಚಾರ: ಶಾಸಕ ಎಂ.ಪಿ ರೇಣುಕಾಚಾರ್ಯ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಿದ‍್ಧರಾಮಯ್ಯ ಒತ್ತಾಯ.

ಮೈಸೂರು,ಮಾರ್ಚ್,25,2022(www.justkannada.in): ಪುತ್ರಿಗೆ ನಕಲಿ ಜಾತಿ ಪ್ರಮಾಣ ಪತ್ರ ಕೊಡಿಸಿ ಸರ್ಕಾರದ ಸವಲತ್ತು ಪಡೆದಿದ್ದಾರೆ ಎಂಬ ಆರೋಪ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಕೇಳಿ ಬಂದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸರಕಾರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ರೇಣುಕಾಚಾರ್ಯ ರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಬೇಕು. ರೇಣುಕಾಚಾರ್ಯ ಪ್ರಕರಣವನ್ನು ಸರಕಾರ ಸಮರ್ಥಿಸುವುದು ಕಾನೂನು ಬಾಹಿರ ಕೆಲಸಕ್ಕೆ ಪ್ರೋತ್ಸಾಹ ಕೊಟ್ಟಂತೆ ಎಂದು ಟೀಕಿಸಿದರು.

ಜಂಗಮ ಸಮುದಾಯದ ರೇಣುಕಾಚಾರ್ಯ ತನ್ನ ಪುತ್ರಿಗೆ ಎಸ್ ಸಿ ಅಂತಾ  ಪ್ರಮಾಣ ಪತ್ರ ಪಡೆದಿದ್ದನ್ನು ಸರ್ಕಾರ ಸಮರ್ಥಿಸಿದರೆ ಏನೂ ಮಾಡಬೇಕು ಹೇಳಿ.? ಎಂದು ಪ್ರಶ್ನಿಸಿದರು.

Key words: mysore-Former CM-SIddaramaiah-criminal case – MLA -MP Renukacharya