ಮೈಸೂರು ದಸರಾ 2020: ಇಂದು ಗಜಪಡೆಯ ಸಾಂಪ್ರದಾಯಿಕ ಸ್ವಾಗತಕ್ಕೆ ಸಿದ್ಧತೆ.

ಮೈಸೂರು,ಅಕ್ಟೋಬರ್,2,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಮೈಸೂರಿಗೆ ಆಗಮಿಸಿ ಅರಣ್ಯಭವನದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯನ್ನ ಸ್ವಾಗತಿಸಲು ಮೈಸೂರು ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿ ಸಜ್ಜಾಗಿದೆ.jk-logo-justkannada-logo

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ.  ಇಂದು 12.18 ಕ್ಕೆ ಗಜಪಡೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸಂಪುಟ ಎಸ್ ಟಿ ಸೋಮಶೇಖರ್ ಗಜಪಡೆಯನ್ನ ಸ್ವಾಗತಿಸಲಿದ್ದಾರೆ.mysore-dasara-gajapade-abhimanyu-welcome-palace

ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯುಂದ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲು ಸಿದ್ದತೆ ನಡೆಸಲಾಗುತ್ತಿದೆ. ನಿನ್ನೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ನಂತರ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಂಡ ಮೈಸೂರಿನ ಅರಣ್ಯ ಭವನಗೆ ಆಗಮಿಸಿದ್ದು ಅಲ್ಲೇ ಬೀಡುಬಿಟ್ಟಿವೆ. ಇದೀಗ ಅರಣ್ಯಭವನದಿಂದ ಅಭಿಮನ್ಯು ಅಂಡ್ ಟೀಮ್ ನೇರವಾಗಿ ಲಾರಿಗಳ ಮೂಲಕ ಅರಮನೆ ಆವರಣಕ್ಕೆ ಬಂದಿಳಿಯಲಿವೆ.

Key words: mysore-dasara-gajapade- abhimanyu-welcome-palace